ಫಲಿಸದ ಅಭಿಮಾನಿಗಳ ಹಾರೈಕೆ, ಸ್ವರ ಮಾಂತ್ರಿಕ ಎಸ್.ಪಿ.ಬಿ ಇನ್ನಿಲ್ಲ

ಚೆನ್ನೈ: ಕೋವಿಡ್‌–19 ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ (74) ನಿಧನರಾಗಿದ್ದಾರೆ. ಕೋವಿಡ್ ಸೋಂಕು ಇರುವುದು ದೃಢಪಟ್ಟ ಬಳಿಕ ಆಗಸ್ಟ್‌ 5ರಂದು ಎಸ್‌ಪಿಬಿ ಅವರನ್ನು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ವೆಂಟಿಲೇಟರ್‌ ಅಳವಡಿಸಿ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಎಸ್.ಪಿ.ಬಿ. ಆರೋಗ್ಯ ಚೇತರಿಕೆಗೆ ಅವರ ಅಭಿಮಾನಿಗಳು ದೇವರ ಮೊರೆ ಹೋಗಿದ್ದರು ಆದರೆ ಅವರ ಪ್ರಾರ್ಥನೆ ಫಲ ನೀಡಿಲ್ಲ . ಕೆಲವು ದಿನಗಳ ಹಿಂದೆ ಅವರಿಗೆ ಕೊರೊನಾ ನೆಗೆಟಿವ್‌ ಇರುವ ವರದಿ ಕೂಡಾ ಬಂದಿತ್ತು.

promotions

promotions

Read More Articles