ಬೆಳಗಾವಿ ಜಿಲ್ಲೆಯಲ್ಲಿ ಇಂದು 9 ಜನರಲ್ಲಿ ಕೊರೊನಾ ಸೋಂಕು ದೃಢ ವಿಚಾರ

ಬೆಳಗಾವಿ: 7 ತಿಂಗಳ ಹೆಣ್ಣು ಮಗುವಿನಲ್ಲೂ ಕಾಣಿಸಿಕೊಂಡ ಕೊರೊನಾ ಸೋಂಕು. P-1496 - 7 ತಿಂಗಳ ಹೆಣ್ಣು ಮಗುವಿಗೆ ಕೊರೊನಾ ಸೋಂಕು. ಮೇ 7ರಂದು ಮಹಾರಾಷ್ಟ್ರದ ಕೊಲ್ಲಾಪುರದಿಂದ ಆಗಮಿಸಿದ್ದ ಕಲ್ಲೂರ ಮೂಲದ ಕುಟುಂಬ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮ ಬಟಕುರ್ಕಿ ಗ್ರಾಮದಲ್ಲಿ ಸಾಮೂಹಿಕ ಕ್ವಾರಂಟೈನ್‌ನಲ್ಲಿಡಲಾಗಿತ್ತು, ಈ ಪೈಕಿ 7 ತಿಂಗಳ ಹೆಣ್ಣು ಮಗು P-1496ಗೆ ಕೊರೊನಾ ಸೋಂಕು ದೃಢ, ಜಾರ್ಖಂಡ್‌ನ ಶಿಖರ್ಜಿಗೆ ಧಾರ್ಮಿಕ ಯಾತ್ರೆಗೆ ತೆರಳಿದ್ದ ಮೂವರಿಗೂ ಕೊರೊನಾ, ಶಿಖರ್ಜಿಯಿಂದ ಮರಳಿದ್ದ P-1489 65 ವರ್ಷದ ವೃದ್ಧೆ, 1490 - 63 ವರ್ಷದ ವೃದ್ಧೆ, 1493 - 75 ವರ್ಷದ ವೃದ್ಧನಿಗೆ ಕೊರೊನಾ ದೃಢ, ಒಂದೂವರೆ ತಿಂಗಳ ಹಿಂದೆ ಜಾರ್ಖಂಡ್‌ನ ಶಿಖರ್ಜಿಗೆ ಧಾರ್ಮಿಕ ಯಾತ್ರೆಗೆ ತೆರಳಿದ್ದ 15 ಜನರ ತಂಡ, ಲಾಕ್‌ಡೌನ್ ಸಡಿಲಿಕೆ ಬಳಿಕ ರಾಜ್ಯಕ್ಕೆ ಮರಳಿದ್ದ 15 ಜನರು, ಮೇ 6ರಂದು 15 ಜನರನ್ನು ಕಾಗವಾಡ ತಾಲೂಕಿನ ಶಿರಗುಪ್ಪಿಯಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಅಜ್ಮೀರ್‌ನಿಂದ ವಾಪಸ್ ಆಗಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ದೃಢ, ಸಂಪಗಾಂವ ಗ್ರಾಮದ P-1491 24 ವರ್ಷದ ಯುವಕ. P-1492 - 25 ವರ್ಷದ ಯುವಕನಿಗೆ ಕೊರೊನಾ ಸೊಂಕು ದೃಢ, ಸಂಪಗಾಂವ ಗ್ರಾ‌ಮದ ಹಾಸ್ಟೆಲ್‌ನಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‌ಗೆ ಇಡಲಾಗಿತ್ತು, ಅಜ್ಮೇರ್‌ಗೆ ಹೋಗಿ ಮರಳಿದ್ದ 8 ಜನರನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು ಎಂಟು ಜನರಲ್ಲಿ ಇಬ್ಬರಿಗೆ ಕೊರೊನಾ‌ ಸೋಂಕು ದೃಢ. ಹಿರೇಬಾಗೇವಾಡಿಯ ಸೋಂಕಿತ P-721 ಪ್ರಾಥಮಿಕ ಸಂಪರ್ಕದಲ್ಲಿದ್ದ ಮಹಿಳೆಗೂ ಸೋಂಕು P-1562 43 ವರ್ಷದ ಮಹಿಳೆಗೆ ಕೊರೊನಾ‌ ಸೋಂಕು ದೃಢ ಇಂದು ಒಟ್ಟು ಬೇರೆ ರಾಜ್ಯಗಳಿಂದ ಮರಳಿದ್ದ 8 ಜನ ಹಾಗೂ ಓರ್ವ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಬ್ಬ ಸೇರಿ 7 ಜನರಿಗೆ ಕೊರೊನಾ ಸೋಂಕು ದೃಢ

promotions

Read More Articles