ಜನರ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; 1000 ರೂ. ದಿಂದ 250 ರೂ.ಗೆ ದಂಡ ಇಳಿಕೆ

ಬೆಳಗಾವಿ: ಮಾಸ್ಕ್ ಧರಿಸದೆ ರಸ್ತೆಗಿಳಿದವರಿಗೆ ನಗರ ಪ್ರದೇಶದಲ್ಲಿ 1000 ರೂ ದಂಡ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ವಿಧಿಸುವಂತೆ ಈ ಹಿಂದೆ ಸರ್ಕಾರ ಆದೇಶ ನೀಡಿತ್ತು. ಈ ನಿಯಮವನ್ನು ಇಂದು ಸರ್ಕಾರ ತಿದ್ದುಪಡಿ ಮಾಡಿದೆ. ನಗರ ಪ್ರದೇಶದಲ್ಲಿ 1000 ರೂ. ಇದ್ದಿದ್ದನ್ನು 250 ರೂ.ಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ಇದ್ದಿದ್ದನ್ನು 100 ರೂ.ಗೆ ದಂಡವನ್ನು ಬದಲಿಸಿದೆ.

promotions

ಈ ಕುರಿತು ಸಿಎಂ ಯಡಿಯೂರಪ್ಪನವರು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. ಹೌದು... ಕೊರೋನಾ ಮಹಾಮಾರಿಯಿಂದಾಗಿ ಆರು ತಿಂಗಳಿದ ಬೇಸತ್ತ ಜನರು ಕೆಲಸ ಕಾರ್ಯಗಳನ್ನು ಕಳೆದುಕೊಂಡು ಹೊಟ್ಟೆಗೆ ಸರಿಯಾಗಿ ಒಂದು ಹೊತ್ತು ಊಟ ಸಿಗಲಾರದಂತಹ ದುಸ್ಥಿತಿ ಎದುರಾಗಿದೆ. ಅಂತದ್ರಲ್ಲಿ ರಾಜ್ಯ ಸರ್ಕಾರ ಮಾಸ್ಕ್ ಧರಿಸದವರಿಗೆ 1000 ರೂಪಾಯಿ ದಂಡ ವಿಧಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಾಸ್ಕ್ ಧರಿಸದೆ ರಸ್ತೆಗಿಳಿದ ಜನರಿಗೆ ಇಂದು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಈ ನಿಟ್ಟಿನಲ್ಲಿ ಸಾವಿರ ರೂ. ದಂಡ ಸರ್ಕಾರದ ನಿಯಮ ಎಷ್ಟರಮಟ್ಟಿಗೆ ಸರಿಯಾಗಿದೆ ? ಎಂದು ಜನರು ಪ್ರಶ್ನಿಸುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ.

promotions

ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಸರ್ಕಾರದ ಕಾರ್ಯ ಶ್ಲಾಘನೀಯ ಆದರೆ ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಿಯಮಗಳನ್ನು ಜಾರಿ ಮಾಡಿದರೆ ಒಳಿತು ಎನ್ನುವುದು ಜನಾಭಿಪ್ರಾಯವಾಗಿದೆ.

Read More Articles