ಭಾವಿಗಳ ಸ್ವಚ್ಛತೆಗೆ ಆರ್.ಎಸ್.ಎಸ್. ಕೈ ಜೋಡಿಸಿರುವುದು ನಿಜಕ್ಕೂ ಶ್ಲಾಘನೀಯ; ಸಾರ್ವಜನಿಕರ ಅಭಿಪ್ರಾಯ

  • 15 Jan 2024 , 3:18 AM
  • Haveri
  • 122

ಬಂಕಾಪುರ: ತಾಲೂಕಿನಲ್ಲೋಂದಾಗಿರುವ ಬಂಕಾಪುರ ಪಟ್ಟಣದಲ್ಲಿ ಅನೇಕ ಐತಿಹಾಸಿಕ ದೇವಾಲಯಗಳು ಹಾಗೂ ಭಾವಿಗಳು ಇಲ್ಲಿವೆ. ಆದರೆ ಅವುಗಳ ಸರಿಯಾದ ನಿರ್ವಹಣೆ ಇಲ್ಲದೇ ಇರುವುದರಿಂದ ನಶಿಸಿಹೋಗುವ ಹಂತದಲ್ಲಿದ್ದು ಇಂತಹ ಎಲ್ಲ ದೇವಸ್ಥಾನ, ಬಾವಿಗಳ ಐತಿಹಾಸಿಕ ಕುರುಹುಗಳ ಸಂರಕ್ಷಣೆಗೆ ಪುರಸಭೆಯವರೋಂದಿಗೆ ರಾಷ್ಟ್ರೀಯ ಸ್ವಯಂ ಸೇವಕರು ಕೈ ಜೋಡಿಸಿರುವುದು ಸ್ವಾಹತಾರ್ಹ ಕಾರ್ಯವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಸುಮಾರು ಹತ್ತಕ್ಕೀಂತಲೂ ಹೇಚ್ಚು ಪುರಾತನ ಐತಿಹಾಸಿಕ ಬಾವಿಗಳಿದ್ದು, ಜಮಾರಸಿ ಬಾವಿಯಿಂದ ಬಾವಿಗಳ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕಳೆದ ಮೂರುದಿನಗಳಿಂದ ಅಲ್ಲಿ ಸುತ್ತಮುತ್ತಲೂ ವಾಸಿಸುವ ಸಾರ್ವಜನಿಕರಿಗೆ ಕಸದತೋಟ್ಟಿಯಾಗಿ ಮಾರ್ಪಟ್ಟಿದ್ದ ಜಮಾರಸಿ ಬಾವಿಯ ಸ್ವಚ್ಛತೆ ಕಾರ್ಯ ಕೈಗೋಂಡಿದ್ದು, ಮುಳ್ಳು ಕಂಟಿ, ಕಸ, ಕಡ್ಡಿಗಳನ್ನು ತೆರವುಗೋಳಿಸಿ ಮಣ್ಣಿನಿಂದ ಹುದುಗಿ ಹೋಗಿದ್ದ ಬಾವಿಯ ಮೇಟ್ಟಿಲುಗಳ ಮೇಲೆ ಬಿದ್ದ ಮಣ್ಣನ್ನು ತೆರವುಗಳಿಸಿ ಬಾವಿಯ ರಕ್ಷಣೆಗೆ ಮುಂದಾಗಿದ್ದಾರೆ ಈ ಉತ್ತಮ ಕಾರ್ಯಕ್ಕೆ ಸಾರ್ವಜನಿಕರು ಶ್ಲಾನೀಯವಾದದ್ದು ಎಂದರು. ಈ ಸಂದರ್ಭದಲ್ಲಿ ಸ್ವಯಂ ಸೇವಕರಾದ ಹೊನ್ನಪ್ಪ ಹೂಗಾರ, ಸೋಮಶೇಖರ ಗೌರಿಮಠ, ಶಿವಾನಂದ ದೇವಸೂರ, ಹನುಮಂತ ಮಾದರ, ಆಂಜನೇಯ ಹೊಸಮನಿ, ಬಸವರಾಜ ಉಳ್ಳಾಗಡ್ಡಿ, ಸುರೇಶ ಉಥಳೆಕರ, ನಾರಾಯಣ ಕಲಘಟಗಿ, ಶಿವಾಜಿ ಪುಜಾರ, ವಿಠಲ ಗೋದಾಯಿ, ಹರ್ಷ ಮಾ.ಪ.ಶೆಟ್ಟರ ಸೇರಿದಂತೆ ಪೌರಕಾರ್ಮಿಕರು ಸೇವಾ ಕಾರ್ಯದಲ್ಲಿ ತೊಡಗಿದ್ದರು.

promotions

promotions

Read More Articles