ಮಿಸೈಲ್ ಮ್ಯಾನ್ ಬಗ್ಗೆ ಪ್ರತಿಯೊಬ್ಬರೂ ಓದಲೇಬೇಕಾದ 15 ವಿಷಯಗಳು
- 23 Dec 2023 , 6:04 PM
- Belagavi
- 252
» ತಮಿಳುನಾಡಿನ ರಾಮೇಶ್ವರಂನಲ್ಲಿ 15 ಅಕ್ಟೋಬರ್ 1931 ರಂದು ಜನಿಸಿದ ಅಬ್ದುಲ್ ಕಲಾಂರು, ಪೂರ್ಣ ಹೆಸರು ಅವ್ವಲ್ಫಕೀರ್ಜೈನುಲ್ಆಬೀದೀನ್ಅಬ್ದುಲ್ಕಲಾಂ.


» 1954ರಲ್ಲಿ ತಿರುಚಿಯ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಸೈನ್ಸನಲ್ಲಿ ಪದವಿ ಪಡೆದರು. ನಂತರ 1957ರಲ್ಲಿ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕಲ್ ಇಂಜಿನಿಯರಿಂಗನಲ್ಲಿ ಉನ್ನತ ಶಿಕ್ಷಣ.


» ರೋಹಿಣಿ ಉಪಗ್ರಹವನ್ನು ಭೂಕಕ್ಷೆಗೆ ಹಾರಿಸಿದ ಭಾರತದ ಮೊತ್ತಮೊದಲ ಉಪಗ್ರಹ ಉಡಾವಣಾ ವಾಹಕ (SLV III)ಕ್ಕೆ ಕಲಾಂ ನೇತೃತ್ವ ವಹಿಸಿದ್ದರು ಬಾಹ್ಯಾಕಾಶ ಕ್ಲಬ್ ಗೆ ಭಾರತದ ಎಂಟ್ರಿ.

» ಸುಮಾರು 2 ದಶಕಗಳ ಕಾಲ ಇಸ್ರೋನಲ್ಲಿ ಸೇವೆ ಸಲ್ಲಿಸಿದ ಬಳಿಕ ಅಬ್ದುಲ್ ಕಲಾಂ ಡಿಆರ್ ಡಿಓನಲ್ಲಿ ಆಧುನಿಕ ಕ್ಷಿಪಣಿ ಅಭಿವೃಧಿ ಪಡಿಸುವ ಮಹತ್ತರ ಜವಾಬ್ದಾರಿ ಹೊತ್ತುಕೊಂಡು ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿ ಕಾರ್ಯರೂಪಕ್ಕಿಳಿಸಿ ಕ್ಷಿಪಣಿ ಮನುಷ್ಯನೆಂಬ ಬಿರುದು.

» ಪರಮಾಣು ಶಕ್ತಿ ಕೇವಲ 5 ರಾಷ್ಟ್ರಗಳಿಗೆ [ಅಮೆರಿಕಾ, ರಷ್ಯಾ, ಇಂಗ್ಲಂಡ್, ಚೀನಾ ಮತ್ತು ಫ್ರಾನ್ಸ್] ಮಾತ್ರ ಸೀಮಿತವಾಗಿದ್ದ ಕಾಲವದು. ಫೋಕ್ರಾನ್-II ಪರಮಾಣು ಪರೀಕ್ಷೆ ನಡೆಸುವ ಮೂಲಕ ಭಾರತವು ತನ್ನ ಪರಮಾಣು ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿತು.
» ಇದರ ಹಿಂದಿನ ಶಕ್ತಿ ಎಂದರೆ ಡಾ.ಕಲಾಂ. 2018ರಲ್ಲಿ ‘ಪರಮಾಣು: ದಿ ಸ್ಟೋರಿ ಆಫ್ ಫೋಕ್ರಾನ’ ಜಾನ್ ಅಬ್ರಹಾಂ ನಟನೆಯ ಚಿತ್ರ ಅಬ್ದುಲ್ ಕಲಾಂರಿಂದ ಸ್ಫೂರ್ತಿ ಪಡೆದಿದೆ.

» ಭಾರತ ಹಾಗೂ ವಿದೇಶ ವಿವಿಗಳಿಂದ ಬರೋಬ್ಬರಿ 48 ಗೌರವ ಡಾಕ್ಡರೇಟ್ ಗಳನ್ನು ಪಡೆದ ಹಿರಿಮೆ ಕಲಾಂ ಅವರದ್ದಾಗಿದೆ. ಭೌತಶಾಸ್ತ್ರ ಮತ್ತು ರಕ್ಷಣಾ ತಂತ್ರಜ್ಞಾನದ ಹೊರತು, ಕಲಾಂ ಗ್ರಾಮೀಣ ಆರೋಗ್ಯ ಕ್ಷೇತ್ರವನ್ನು ಉತ್ತಮಪಡಿಸುವಲ್ಲೂ ಶ್ರಮಿಸಿದ್ದಾರೆ.

» ಹೃದಯರೋಗ ತಜ್ಞ ಸೋಮರಾಜು ಜೊತೆ ಸೇರಿ ಕಡಿಮೆ ಬೆಲೆಯ ಸ್ಟೆಂಟನ್ನು ಅಭಿವೃದ್ಧಿಪಡಿಸಿದ್ದಾರೆ. ತರುವಾಯ ಆ ಸ್ಟೆಂಟ್ ಗೆ ಕಲಾಂ-ರಾಜು ಸ್ಟೆಂಟ್ ಎಂದೇ ನಾಮಕರಣ ಮಾಡಲಾಗಿದೆ.

» 1992-1999 ವರೆಗೆ ಕಲಾಂ ಪ್ರಧಾನಿ ಮುಖ್ಯ ವೈಜ್ಞಾನಿಕ ಸಲಹೆಗಾರರನಾಗಿ ಮತ್ತು ಡಿಆರ್ ಡಿಓ ಕಾರ್ಯದರ್ಶಿಯಾಗಿ ಕಲಾಂ ಸೇವೆ ಸಲ್ಲಿಸಿದ್ದಾರೆ.

» 2002ರಲ್ಲಿ ದೇಶದ ಇತಿಹಾಸದಲ್ಲಿ ಲಕ್ಷ್ಮೀ ಸೆಹಗಲ್ ಅವರನ್ನು ಸೋಲಿಸಿ ಕಲಾಂ, ‘ಜನಾನುರಾಗಿ ರಾಷ್ಟ್ರಪತಿ’ಯೆಂದೇ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2002-2007ರ ವರೆಗೆ ಡಾ.ಎಪಿಜೆ ಅಬ್ದುಲ್ ಕಲಾಂ ಭಾರತದ 11ನೇ ರಾಷ್ಟ್ರಪತಿಗಳಾಗಿ ಗುರುತಿಸಿಕೊಂಡಿದ್ದಾರೆ.

» ಡಾ.ಅಬ್ದುಲ್ ಕಲಾಂರವರು ಜುಲೈ 27, 2015 ರಂದು ಶಿಲ್ಲಾಂಗ್ ನಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
» ಕೊನೆಯ ಉಸಿರು ಇರುವವರೆಗೂ ಅವರು ಸೇವೆಯಲ್ಲಿ ನಿರತರಾಗಿದ್ದು, ಇಡೀ ದೇಶದ ಜನತೆಗೆ ಮಾದರಿಯ ವ್ಯಕ್ತಿತ್ವ.










