ಕಳೆದ ವರ್ಷದ ಅತಿವೃಷ್ಟಿ ಅನುಧಾನದಲ್ಲಿ ಭಾರಿ ಭ್ರಷ್ಟಾಚಾರ; ಡಿ ಎಸ್ ಮಾಳಗಿ ಆರೋಪ

  • 14 Jan 2024 , 10:34 PM
  • Haveri
  • 96

ಬಂಕಾಪುರ: ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿ ಅನಾವೃಷ್ಟಿಯಿಂದಾಗಿ ಜನರು ಪರದಾಡುವಂತಾಗಿದ್ದು ಸರ್ಕಾರ ನೀಡಿರುವ ಅನುಧಾನ ಒದಗಿಸುವಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಅದನ್ನು ತನಿಖೆ ಮಾಡುವಂತೆ ದಲಿತ ಮುಖಂಡ ಡಿ ಎಸ್ ಮಾಳಗಿ ಬೆಳಗಾವಿ ಪ್ರಾಧೇಶಿಕ ಆಯುಕ್ತ ಆದಿತ್ಯಾಮ್ಲನ್ ಬಿಸ್ವಾಸ ಅವರಿಗೆ ಮನವಿ ಸಲ್ಲಿಸಿದರು. ಇಂದು ಮಾಧ್ಯವರೊಂದಿಗೆ ಮಾತನಾಡಿದ ಅವರು, ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ 2019 ಮತ್ತು 2020 ರಲ್ಲಿ ಭಾರಿ ಮಳೆಯಿಂದಾಗಿ ಸಾವಿರಾರು ಮನೆಗಳು ಧರೆಗುರುಳಿವೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗುವುದರ ಜೊತೆಗೆ ರೈತರಿಗೆ ತುಂಬಾ ನಷ್ಟವಾಗಿದೆ. ಇತ್ತ ಸರ್ಕಾರ ಮನೆ ಬಿದ್ದವರಿಗೆ ಹಾಗೂ ಬೆಳೆ ಹಾನಿಯಾದವರಿಗೆ ಪರಿಹಾರ ನೀಡಲು ಕ್ಷೇತ್ರಕ್ಕೆ ಹತ್ತಾರು ಕೋಟಿಗಳ ರೂಗಳ ಅನುಧಾನ ನೀಡಿದರೂ ಇಲ್ಲಿ ಮಾತ್ರ ಅರ್ಹ ಫಲಾನುಭವಿಗಳಿಗೆ ಪರಿಹಾರ ದೊರಕಿಲ್ಲ. ರಾತ್ರೋ ರಾತ್ರಿ ಮನೆ ಕೆಡವಿದವರಿಗೆ ಮತ್ತು ನಕಲಿ ರೈತರಿಗೆ ಪರಿಹಾರ ದೊರಕಿದೆ, 2019 ರಿಂದ ಇಂದಿನವರೆಗೂ ಮುಗ್ದ ಫಲಾನುಭವಿಗಳು ಗ್ರಾಮಲೇಕ್ಕಾಧಿಕಾರಿ, ಪಿ,ಡಿ,ಓ ತಹಶೀಲ್ದಾರ, ಇಂಜನೀಯರ ಕಛೇರಿಗಳಿಗೆ ಅಲೆದಾಡುವಂತಾಗಿದೆ. ಸಂಭAದಿಸಿದ ಅಧಿಕಾರಿಗಳು ಸ್ವಜಾತಿಯವರಿಗೆ, ರಾಜಕೀಯ ಬೆಂಬಲವಿದ್ದವರಿಗೆ ಹಣ ಬಿಡುಗಡೆ ಮಾಡಿದೆ.

promotions
logintomyvoice

ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ, ಇದು ಅಧಿಕಾರಿಗಳು ನಡೆಸುತ್ತಿರುವ ಭ್ರಚ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದರಬಗ್ಗೆ ಸಂಬAದಪಟ್ಟ ಮೇಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೆಲೆ ಕಾನೂನು ಕ್ರಮ ಜರೂಗಿಸಿ ಹಾಗೂ ಅರ್ಹ ಫಲಾನುಭವಿಗಳಿಗೆ ನ್ಯಾಯ ವದಗಿಸುವಂತೆ ಮನವಿ ಮಾಡಲಾಗಿದೆ ಎಂದರು.

promotions

Read More Articles