ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸತೀಶ ಜಾರಕಿಹೊಳಿ

ಹುಕ್ಕೇರಿ: ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಉ. ಖಾನಾಪೂರ ಗ್ರಾಮದ ಬಹುದಿನಗಳ ಬೇಡಿಕೆಯಾದ ಗಿರಿನಗರದಲ್ಲಿರುವ ಚಿಕ್ಕ ನೀರಾವರಿ ಕೆರೆ ತುಂಬುವ ಕಾಮಗಾರಿ ಕೊರೋನಾ ಸೊಂಕಿನಿ0ದಾಗಿ ವಿಳಂಬವಾಗಿದ್ದು ಬೆಸಿಗೆಯಷ್ಟರಲ್ಲಿ ಕೆರೆಗೆ ನೀರು ತುಂಬಿಸುವ ಕಾರ್ಯ ನೆರವೆರಲಿದೆ ಹಾಗೂ ಚಿಕಾಲಗುಡ ದಿಮದ ಆನಂದಪೂರ ಆರ್,ಸಿ, ವರೆಗಿನ ರಸ್ತೆ ತುದಿಮಾಳ ತೋಟ ಉಳ್ಳಾಗಡ್ಡಿ-ಖಾನಾಪೂರ ಹಾಗೂ ಗಿರಿನಗರ ಮಾರ್ಗವಾಗಿ ಸುಮಾರು ೫೭೩.೭೩ ಲಕ್ಷ ರೂಗಳಲ್ಲಿ ಸುಮಾರು ೧೦ ಸಣ್ಣ ಸೇತುವೆಗಳು ಸೇರಿ ರಸ್ತೆ ಉತ್ತಮವಾಗಿ ನಿರ್ಮಾಣವಾಗಲಿದೆ ಎಂದು ಕೆ,ಪಿ,ಸಿ,ಸಿ,ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಹೇಳಿದರು.

promotions
logintomyvoice

ಗ್ರಾಮದ ತುದಿಮಾಳ ತೋಟದಲ್ಲಿ ನಡೆದ ರಸ್ತೆ ಕಾಮಗಾರಿ ಸರಳ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉಳ್ಳಾಗಡ್ಡಿ-ಖಾನಾಪೂರದಿಂದ ಹತ್ತರಗಿ ಟೋಲ ವರೆಗಿನ [ಸಂತಿ ಮಾರ್ಗ] ಕೂಡು ರಸ್ತೆ ಕಾಮಗಾರಿಯನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು ಇದಲ್ಲದೆ ಎಸ್,ಟಿ, ವಸತಿ ಪ್ರದೇಶಗಳ ಕೆಲ ಒಳ ರಸ್ತೆಗಳನ್ನು ಮಳೆ ಕಡಿಮೆಯಾದ ನಂತರ ಹಂತಹAತವಾಗಿ ಅಭಿವೃದ್ದಿ ಮಾಡಲಾಗುತ್ತದೆ. ತುದಿಮಾಳ ತೋಟದ ಜನರಿಗೆ ಅಗತ್ಯವಿರುವ ಒಳ ರಸ್ತೆಗಾಗಿ ಗ್ರಾಮದ ಮುಖಂಡರನ್ನು ಸಭೆಕರೆದು ಚರ್ಚಿಸಲಾಗುತ್ತದೆ ಕಾರಣ ಈ ರಸ್ತೆಗೆ ಮಾಲ್ಕಿ ಜಮೀನಿನವರ ಅನುಮತಿಯ ಅಗತ್ಯವಿದೆ ಎಂದು ಸ್ಪಷ್ಟ ಪಡಿಸಿದರು. ಈ ಸಂದರ್ಭದಲ್ಲಿ ರಾಜು ಅವಟೆ, ಸುಧೀರ ಗಿರಿಗೌಡರ, ಜಿ,ಪಂ ಸದಸ್ಯರಾದ ಮಹಾತೆಂಶ ಮಗದುಮ್ಮ, ಪಿ.ಎಚ್ ಪಾಟೀಲ, ಭರಮಗೌಡಾ ಪಾಟೀಲ, ಇಲಿಯಾಸ ಇನಾಮದಾರ, ಬಾಬಾಗೌಡಾ ಪಾಟೀಲ, ಶಾಹಿನ್ ಹಜರತಭಾಯಿ, ಬಸೀರ ಲಾಡಖಾನ್, ಪ್ರಕಾಶ ಬಸ್ಸಾಪೂರಿ, ಅಭಿವೃದ್ದಿ ಅಧೀಕಾರಿ ಲಕ್ಷ್ಮೀನಾರಾಯಣ, ಮಾಜಿ ಸೈನಿಕರ ಸಂಘದ ಸದಸ್ಯರು, ತುದಿಮಾಳ ಗ್ರಾಮಸ್ತರು, ಹಾಗೂ ಇತರರು ಉಪಸ್ಥಿತರಿದ್ದರು.

promotions

Read More Articles