ಸಾರ್ವಜನಿಕ ಆಸ್ಪತ್ರೆಗೆ ಕೊರೋನಾ ಟೆಸ್ಟಿಂಗ್ ಯಂತ್ರ ವಿತರಿಸಿದ ಎಸ್.ಆರ್. ಪಾಟೀಲ
- 15 Jan 2024 , 2:12 AM
- Haveri
- 112
ಬ್ಯಾಡಗಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಜೈವಿಕ ಇಂಧನ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ 1 ಲಕ್ಷ ರೂ. ವೆಚ್ಚದಲ್ಲಿ ಕೊರೋನಾ ಸೋಂಕು ಪತ್ತೆ ಮಾಡುವ ಪ್ರೋಪೈಲ್ ಟೆಸ್ಟಿಂಗ್ ಯಂತ್ರವನ್ನು ವಿತರಿಸಿ ಮಾತನಾಡಿದ ಅವರು, ಮಹಾಮಾರಿ ಕೊರೋನಾ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ ಆದ್ದರಿಂದ ಪ್ರತಿಯೊಬ್ಬರು ಮುಂಜಾಗ್ರತೆ ಕ್ರಮ ಅನುಸರಿಸುವೊಂದೇ ಏಕೈಕ ಪರಿವಾರವಾಗಿದೆ. ಈ ಮಹಾಮಾರಿಯನ್ನು ತಡೆಗಟ್ಟುವಲ್ಲಿ ಅರೋಗ್ಯ ಇಲಾಖೆಗೆ ಸಾರ್ವಜನಿಕರು ಸಹಕರಿಸಬೇಕು ವೈದ್ಯರು ತಿಳಿಸುವ ಮುನ್ನಚ್ಚೇರಿಕೆ ಕ್ರಮಗಳನ್ನು ಅನುಸರಿಸಿ ಔಷಧಿ ಸೇವಿಸುವ ಮೂಲಕ ರೋಗದ ವಿರುದ್ಧ ಹೊರಾಡಬಹುದು ಆದ್ದರಿಂದ ರೋಗಿಗಳು ಭೀತಿ ಪಡುವುದನ್ನು ಬಿಟ್ಟು ಉತ್ತಮ ಚಿಕಿತ್ಸೆ ಪಡೆಯಬೇಕೆಂದು ಮನವಿ ಮಾಡಿದರು.

ಈ ಆಸ್ಪತ್ರೆಯಲ್ಲಿ ಕೋವಿಡ್-19 ವಿಭಾಗವನ್ನು ಪ್ರತ್ಯೇಕವಾಗಿ ತೆರೆಯಲಾಗಿದ್ದು, ಉಳ್ಳವರು ದೂರದ ಖಾಸಗಿ ಸೇರಿದಂತೆ ಹೈಟೆಕ್ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಬಡರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಅನಿವಾರ್ಯ. ಸರ್ಕಾರ ಈಗ ನೀಡಿರುವ ಸೌಲಭ್ಯದ ಜೊತೆ ಇನ್ನಷ್ಟು ವಿಶೇಷ ಉಪಕರಣಗಳನ್ನು ನೀಡಬೇಕಿದ್ದು, ಅಗತ್ಯ ಸೌಲಭ್ಯಗಳನ್ನು ಸಕಾಲಕ್ಕೆ ಪೂರೈಸದಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಿದರು. ನಂತರ ಡಾ. ಪುಟ್ಟರಾಜ ಮಾತನಾಡಿ, ಸಾರ್ವಜನಿಕರು ಮನೆಬಿಟ್ಟು ಹೊರ ಹೋಗುವಾಗ ಕಡ್ಡಾಯವಾಗಿ ಮಾಸ್ಕ, ಸ್ಯಾನಿಟೈಜರ್ ಬಳಸಬೇಕು.

ನಿರ್ಲಕ್ಷಿಸಿದಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಿದೆ. ಎಲ್ಲರೂ ಆಸ್ಪತ್ರೆಯಲ್ಲಿ ದಾಖಲಾದರೆ ಚಿಕಿತ್ಸೆ ಕಷ್ಟ, ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಉತ್ತಮ ಚಿಕಿತ್ಸೆಯಾಗಿದೆ. ಬಹುತೇಕರು ಕರೋನ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಇದರಿಂದ ಸಮಸ್ಯೆ ಹೆಚ್ಚಾಗಲಿವೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಂದ್ರಕಾAತ, ಡಾ.ಶ್ರೀನಿವಾಸ, ಡಾ.ವಿರೇಶ ಹೊಸಮನಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.










