ಬಾಂಬ್ ಸ್ಪೋಟಕ್ಕೆ ತತ್ತರಿಸಿದ ಪಾಕಿಸ್ತಾನ
- 17 Dec 2023 , 11:09 PM
- world
- 93
ಪಾಕಿಸ್ತಾನ: ಪಾಕಿಸ್ತಾನದ ಗುಲ್ಶನ್-ಎ-ಇಕ್ಬಾಲ್‌ನ ಕರಾಚಿ ವಿಶ್ವವಿದ್ಯಾಲಯ ಮಸ್ಕನ್ ಗೇಟ್ ಎದುರಿನ ಕಟ್ಟಡವೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬುಧವಾರ ಅ. 21 ರಂದು ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಸ್ಫೋಟ ಸಂಭವಿಸಿ ಕನಿಷ್ಠ ಮೂರು ಜನರು ಸಾವನ್ನಪ್ಪಿ ಸುಮಾರು 15 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಡಾನ್ ವರದಿ ಮಾಡಿದೆ.

ಸ್ಫೋಟದ ಕಾರಣವನ್ನು ಪೊಲೀಸರು ಇನ್ನೂ ಪತ್ತೆ ಮಾಡಿಲ್ಲ ಆದರೆ ಅದು "ಸಿಲಿಂಡರ್ ಸ್ಫೋಟ ಎಂದು ತೋರುತ್ತದೆ" ಎಂದು ಹೇಳಲಾಗಿದೆ. ಕಟ್ಟಡದ ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ. ನಿನ್ನೆ ಮಂಗಳವಾರ ಶೆರಿನ್ ಜಿನ್ನಾ ಕಾಲೋನಿ ಬಳಿಯ ಬಸ್ ಟರ್ಮಿನಲ್ ನಲ್ಲಿ ಬಾಂಬ್ ಸ್ಫೋಟಗೊಂಡು ಐದು ಜನರು ಗಾಯಗೊಂಡಿರುವ ಬೆನ್ನಲ್ಲೇ ಇಂದು ಮತ್ತೆ ಇಂತಹ ಘಟನೆ ನಡೆದಿದೆ.

ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರು ಅಳಿಯ ಸಫ್ದಾರ್ ಅವನ್ ಅವರನ್ನು ಬಂಧಿಸುವಂತೆ ಕರಾಚಿ ಪೊಲೀಸರ ಮೇಲೆ ಒತ್ತಡ ಹೇರುವ ಸಲುವಾಗಿ ಸಿಂಧ್ ಪೊಲೀಸ್ ಮುಖ್ಯಸ್ಥರನ್ನು ಪಾಕಿಸ್ತಾನ ಸೇನಾ ಪಡೆಗಳು ಅಪಹರಿಸಿದ್ದಾರೆ ಎಂಬ ವದಂತಿಗಳ ಬಗ್ಗೆ ತನಿಖೆಗೆ ಆದೇಶಿಸಿರುವ ಸಮಯದಲ್ಲಿ ಈ ಮಾರಣಾಂತಿಕ ಘಟನೆ ನಡೆದಿದೆ ಎನ್ನಲಾಗಿದೆ.










