ಸ್ಯಾಂಡಲವುಡ್ ಗೆ ಜೂನಿಯರ್ ಚಿರು ಆಗಮನ:ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾರಾಜ್

  ಬೆಂಗಳೂರು :ಕನ್ನಡ ಚಿತ್ರರಂಗದಲ್ಲಿ ಇಗ ಸಂತೋಷದ ವಾತಾವರಣ ಮನೆ ಮಾತಾಗಿದೆ ಸ್ಯಾಂಡಲವುಡ್ ಗೆ ಚಿರು ಸರ್ಜಾ ಪುತ್ರನ ಆಗಮನವಾಗಿದೆ ಸರ್ಜಾ ಕಟುಂಬದಲ್ಲಿ ಇಗ ಖುಷಿಯ ವಾತಾವರಣ ನಿರ್ಮಾಣವಾಗಿದೆ. (ಅ. 22) ಇಂದು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಇಂದು ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್​ ನಿಶ್ಚಿತಾರ್ಥ ಮಾಡಿಕೊಂಡ ದಿನ. ಇದೇ ದಿನ ಸರ್ಜಾ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಇಂದು ಮೇಘನಾ ರಾಜ್​ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಸರ್ಜಾ ಕುಟುಂಬಕ್ಕೆ ಜೂನಿಯರ್​ ಸರ್ಜಾ ಅವರ ಆಗಮನವಾಗಿದೆ. ವೈದ್ಯರು ಡೇಟ್​ ಕೊಟ್ಟ ಹಿನ್ನೆಲೆಯಲ್ಲಿ ಮೇಘನಾ ರಾಜ್​ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ 11:07ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪತಿ ಚಿರಂಜೀವಿ ಸರ್ಜಾ ನಿಧನರಾದಾಗ (ಜೂ.7) ಮೇಘನಾ 5 ತಿಂಗಳ ಗರ್ಭಿಣಿ ಆಗಿದ್ದರು. ಹೃದಯಾಘಾತದಿಂದ ಚಿರು ಮೃತಪಟ್ಟಾಗ ಮೇಘನಾ ನೋವಿನ ಕಡಲಲ್ಲಿ ಮುಳುಗುವಂತಾಗಿತ್ತು. ಇಡೀ ಸರ್ಜಾ ಕುಟುಂಬ ಕಣ್ಣೀರು ಹಾಕುತ್ತ ದಿನ ಕಳೆಯುತ್ತಿತ್ತು. ಈಗ ಮಗುವಿನ ಆಗಮನದಿಂದಾಗಿ ಸರ್ಜಾ ಫ್ಯಾಮಿಲಿಯಲ್ಲಿ ನಗುವಿನ ಅಲೆ ಮೂಡಿದೆ. ಚಿರು ಅಭಿಮಾನಿಗಳಲ್ಲಿ ಹರ್ಷೋದ್ದಾರ ಮನೆಮಾತಗಿದೆ.ಸಮಾಜಿಕ ಜಾಲತಾಣಗಳಲ್ಲಿ ಇಗ ಚಿರು ಪುತ್ರನ ಆಗಮನ ಸಕತ್ ವೈರಲ್ ಆಗಿದೆ.

promotions

promotions

Read More Articles