ಭಾರತದ ಬತ್ತಳಿಕೆ ಸೇರಲು ಸಜ್ಜಾಗಿದೆ ನಾಗ್ ಕ್ಷಿಪಣಿ

ಪೋಖ್ರಾನ್: ದೇಶಿಯ ಕ್ಷಿಪಣಿಗಳನ್ನು ಸತತವಾಗಿ ಯಶಸ್ವಿ ಪರೀಕ್ಷೆ ನಡೆಸುತ್ತಿರುವ ಭಾರತ ಇದೀಗ ಮತ್ತೊಂದು ಕ್ಷಿಪಣಿಯನ್ನು ಯಶಸ್ವಿ ಪರೀಕ್ಷೆ ನಡೆಸಿದ್ದು, ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಟ್ಯಾಂಕ್‌ ನಿರೋಧಕ ಗುರಿ ನಿರ್ದೇಶಿತ 'ನಾಗ್‌' ಕ್ಷಿಪಣಿಯ ಅಂತಿಮ ಪರೀಕ್ಷೆ ಯಶಸ್ವಿಯಾಗಿದೆ.

promotions

 ಈ ಕ್ಷಿಪಣಿಯು ಭಾರತದ ಬತ್ತಳಿಕೆ ಸೇರಲು ಸಜ್ಜಾಗಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ 'ನಾಗ್‌' ಮಿಸೈಲ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ಡಿ ಆರ್ ಡಿ ಓ ಈ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದ್ದು ಮತ್ತು ರಾಜಸ್ಥಾನದ್ ಪೋಕ್ರಾನ್ ನಲ್ಲಿ ಅಕ್ಟೋಬರ್  22 ಬೆಳಿಗ್ಗೆ 6:45 ಗೆ ಯಶಸ್ವಿಯಾಗಿ ಪರೀಕ್ಷೆ ನಡಿಸಿದೆ.

promotions

ನಾಗ ಕ್ಷಿಪಣಿಯನ್ನು ನಾಗ್ ಮಿಸೈಲ್ ಕ್ಯಾರಿಯರ್ ಮೂಲಕ ಉಡಾಯಿಸಲಾಗುವುದು ಹಾಗೂ ಈ ಕ್ಷಿಪಣಿಯು 4 ರಿಂದ 7 ಕಿಮಿ ವ್ಯಾಪ್ತಿಯ ಇರುವ ಶತ್ರು ಟ್ಯಾಂಕ್ ಗಳನ್ನು ನಾಶ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಹಗಲು ಮತ್ತು  ರಾತ್ರಿ ವೇಳೆ ಕಾರ್ಯ ನಿರ್ವಹಿಸುವ ಮೂಲಕ ತನ್ನ ನಿಖರ ಗುರಿ ತಲುಪಲು ಅತ್ಯಾಧುನಿಕ ಮಾರ್ಗದರ್ಶಿ ವ್ಯವಸ್ಥೆ, ಇನ್ಫಾರೆಡ್ ಕಿರಣ ಮತ್ತು ಏರಿಯೋನಿಕ್ಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದು ಡಿಆರ್‌ಡಿಒ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ಸೇನೆಗೆ 300 ನಾಗ್ ಕ್ಷಿಪಣಿ ಮತ್ತು 25 ನಾಮಿಕಾಗಳನ್ನು ಸ್ವಾದೀನಪಡಿಸಿಕೊಳ್ಳಲು ರಕ್ಷಣಾ ಸಚಿವಾಲಯ 2018 ರಲ್ಲಿ 200 ನಾಗ್ ಎಟಿಜಿಎಂಗಳನ್ನು ಹೊಂದಲು ಕೇಂದ್ರ ರಕ್ಷಣಾ ಸಚಿವಾಲಯ ಅನುಮತಿ ನೀಡಿತ್ತು. 

ಅದರ ಬೆನ್ನಲ್ಲೇ ನಿನ್ನೆ ಅಂತಿಮವಾಗಿ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿರುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.

Read More Articles