ಮತ್ತೋರ್ವ ಕೇಂದ್ರ ಸರ್ಕಾರದ ಮಂತ್ರಿಗೆ ಕೋರೊನಾ ಸೋಂಕು ದೃಢ.
- 6 Jan 2024 , 8:21 AM
- Delhi
- 113
ನವದೆಹಲಿ: ತಮಗೆ ಕೋರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು ಪದಗಳನ್ನು ಹುಡುಕುವುದು ನನಗೆ ಅಪರೂಪ, ಆದ್ದರಿಂದ ಸರಳವಾಗಿ ತಿಳಿಸುತ್ತಿದ್ದೇನೆ. ನನಗೆ ಕೋವಿಡ್-19 ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ.

ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲ ತಕ್ಷಣವೇ ಪರೀಕ್ಷೆಗೆ ಒಳಪಡಲು ವಿನಂತಿಸುತ್ತಿದ್ದೇನೆ,ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.











