ನವ್ಹೆಂಬರ್ 2 ರಿಂದ RCU ಸ್ನಾತಕೋತ್ತರ ಕೌನ್ಸಲಿಂಗ್ ಪ್ರವೇಶಾತಿ ಪ್ರಕ್ರಿಯೆ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 2020-21 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೌನ್ಸಲಿಂಗ್ ಪ್ರವೇಶಾತಿ ಪ್ರಕ್ರಿಯೆಯು ನವ್ಹೆಂಬರ್ 2 ರಿಂದ ನಡೆಯಲಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ವಾಣಿಜ್ಯಶಾಸ್ತ್ರ ವಿಷಯದ ಪ್ರವೇಶಾತಿ ಪ್ರಕ್ರಿಯೆಯನ್ನು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ, ಶ್ರೀನಗರ, ಬೆಳಗಾವಿಯಲ್ಲಿ ಕೈಗೊಳ್ಳಲಾಗುತ್ತಿದೆ. ಇನ್ನುಳಿದ ವಿಷಯಗಳ ಪ್ರವೇಶಾತಿಯ ಕೌನ್ಸಲಿಂಗ್ ಪ್ರಕ್ರಿಯೆಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣ, ಭೂತರಾಮನಹಟ್ಟಿಯಲ್ಲಿ ಕೈಗೊಳ್ಳಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ http://rcub.ac.inವಿಶ್ವವಿದ್ಯಾಲಯದ ವೆಬ್ಸೈಟ್ ಮೂಲಕ ಪಡೆದುಕೊಳ್ಳಬಹುದು ಎಂದು ರಾಣಿ ಚೆನ್ನಮ್ಮ ವಿ.ವಿ. ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

promotions

promotions

Read More Articles