ಗ್ರಾಮಸ್ಥರು ಸರಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕು: ಶಾಸಕ ಉಮೇಶ ಕತ್ತಿ

ಹುಕ್ಕೇರಿ: ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗಾಗಿ ಸರಕಾರ ಹಲವಾರು ಯೋಜನೆಗಳನ್ನು ಮಂಜೂರು ಮಾಡಿ ಅನುಷ್ಠಾನಗೊಳಿಸುತ್ತಿದ್ದು ಗ್ರಾಮಸ್ಥರು ಸರಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕೆಂದು ಶಾಸಕ ಉಮೇಶ ಕತ್ತಿ ಹೇಳಿದರು. ಮಂಗಳವಾರ ದಿ. 3 ರಂದು ಘೋಡಗೇರಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಅಹವಾಲಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಘೋಡಗೇರಿ ಗ್ರಾಮದ ಪ್ರತಿಯೊಂದು ಮನೆಗೆ ಶುದ್ದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುವದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರೈತರು ಹೊಲಗದ್ದೆಗಳಿಗೆ ಹೋಗಲು ರಸ್ತೆಗಳ ಸುಧಾರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಘೋಡಗೇರಿ ಜಿ.ಪಂ ಸದಸ್ಯ ಅರ್ಜುನ ಪಾಟೀಲ, ಬಿ.ಜೆ.ಪಿ ಹುಕ್ಕೇರಿ ಮಂಡಳಿ ಅಧ್ಯಕ್ಷ ರಾಚಯ್ಯಾ ಹಿರೇಮಠ, ಸಿದ್ದರಾಮ ಮುಗಳಿ, ಗಂಗಾಧರ ಕಡೆಲ್ಲಿ, ಗುರುನಾಥ ಕಡೆಲ್ಲಿ, ಇಬ್ರಾಹಿಂ ಮುಕಾಶಿ, ಶ್ರೀಕಾಂತ ಪೂಜೇರಿ, ಅಧಿಕಾರಿಗಳಾದ ಅಶೋಕ ಪಟ್ಟಣಶೆಟ್ಟಿ, ಘೋಡಗೇರಿ ಗ್ರಾ.ಪಂ ಆಡಳಿತ ಅಧಿಕಾರಿ ಮಂಜುನಾಥ ಪರಸನ್ನವರ, ಪಿ.ಡಿ.ಓ ಗೋಪಾಲ ಕರೋಶಿ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

promotions

promotions

Read More Articles