ವಿದ್ಯುತ ದರ ಏರಿಕೆಯ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು; ವಿಶ್ವಾಸ ವೈದ್ಯ

ಬೆಳಗಾವಿ: ಸರ್ಕಾರ ವಿದ್ಯುತ ದರ ಏರಿಕೆ ಮಾಡಿದಕ್ಕೆ ಹಲವೆಡೆ ವಿರೋದ ವ್ಯಕ್ತವಾಗುತಿದೆ. ಈ ಕೋರೋನಾದ ಸಂಕಷ್ಟದಲ್ಲಿದ್ದ ಜನರಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ, ಈ ಬಗ್ಗೆ ಕಾಂಗ್ರೇಸ್ ಮುಖಂಡ ವಿಶ್ವಾಸ ವೈದ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ "ಡಬಲ್ ಇಂಜಿನ್" ಸರ್ಕಾರ ನಮ್ಮದು ಇನ್ಮುಂದೆ ಸುವರ್ಣ ಯುಗ ಎನ್ನುತ್ತಾ ಬಂದ ರಾಜ್ಯ ಬಿಜೆಪಿ ಸರ್ಕಾರ ಜನತೆಗೆ "ಡಬಲ್ ಟಾರ್ಚರ್" ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವು ತುಘಲಕ್ ನಿರ್ಧಾರಗಳು ಜನರನ್ನು ಈಗಾಗಲೇ ಕಡು ಕಷ್ಟಕ್ಕೆ ತಳ್ಳಿದೆ ಮತ್ತೆ ಈಗ ದರ ಏರಿಕೆಯ ಶಿಕ್ಷೆ ನೀಡುತ್ತಿದೆ, ಕೂಡಲೇ ಸರ್ಕಾರ ಈ ನಿರ್ಧಾರಗಳನ್ನ ಹಿಂಪಡೆಯಬೇಕು ಎಂದು ವಿಶ್ವಾಸ ವೈದ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

promotions

promotions

Read More Articles