ಅಮೆರಿಕ ನೂತನ ಅಧ್ಯಕ್ಷರಿಂದ 5 ಲಕ್ಷ ಭಾರತೀಯರಿಗೆ ಅಮೆರಿಕ ಪೌರತ್ವ ನೀಡುವ ಆಲೋಚನೆ
- 14 Jan 2024 , 9:56 PM
- world
- 118
ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷೀಯ ಚುನಾವಣೆ -2020 ರಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ 46 ನೇ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆ ಜೋ ಬೈಡನ್ ಹೊಸ ಹೊಸ ಆಲೋಚನೆಯೊಂದಿಗೆ ಯೋಜನೆಯನ್ನು ಜಾರಿಗೆ ಮಾಡಲಿದ್ದಾರೆ. ಅಮೆರಿಕದಲ್ಲಿ ಸೂಕ್ತ ದಾಖಲೆಗಳಿಲ್ಲದೆ ನೆಲೆಸಿರುವ ಭಾರತದ 5 ಲಕ್ಷ ಜನರು ಸೇರಿದಂತೆ ಸುಮಾರು 1 ಕೋಟಿ 10 ಲಕ್ಷ ವಲಸಿಗರಿಗೆ ಅಮೆರಿಕದ ಪೌರತ್ವ ನೀಡುವ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನ ರೂಪಿಸಲು ಮುಂದಾಗಿದ್ದಾರೆ.


ಬೈಡನ್ ಅವರ ಪ್ರಚಾರ ಕಾರ್ಯ ತಂಡವು ಬಿಡುಗಡೆ ಮಾಡಿರುವ ನೀತಿ ನಿರೂಪಣಾ ದಾಖಲೆಗಳಂತೆ, ಪ್ರತಿ ವರ್ಷ ಕನಿಷ್ಠ 95 ಸಾವಿರ ವಲಸಿಗರು ಅಮೆರಿಕದಲ್ಲಿ ಪ್ರವೇಶ ಪಡೆಯುವ ಬಗ್ಗೆಯೂ ಕಾರ್ಯಕ್ರಮ ರೂಪಿಸಲಿದ್ದಾರೆ ಎಂದು ಹೇಳಲಾಗಿದೆ.


ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಕಾಲಮಾನದಲ್ಲಿ , ಅಮೆರಿಕದಲ್ಲಿ ಆಯ್ಕೆಯಾಗಿರುವ ಮೂರನೇ ಅಧ್ಯಕ್ಷ ಜೋ ಬೈಡನ್ ! ಅಷ್ಟೇ ಅಲ್ಲ ಜೋ ಬೈಡನ್ ಅಮೆರಿಕದ ಉಪಾಧ್ಯಕ್ಷರಾಗಿ ಬರಾಕ್ ಒಬಾಮ ಅವಧಿಯಲ್ಲಿ ಕಾರ್ಯನಿರ್ವಹಿಸಿ ಅನುಭವವುಳ್ಳವರಾಗಿದ್ದಾರೆ.










