ಕೋರೋನಾ ಬಗ್ಗೆ ವಿದ್ಯಾರ್ಥಿಗಳು, ಪೊಷಕರು ಏನು ಹೇಳಿದ್ರು ? ವಿದ್ಯಾರ್ಥಿನಿ ಸಿಎಂಗೆ ಮನವಿ ಮಾಡಿದ್ದೆಕೆ ?

ಬೆಳಗಾವಿ: ಇಂದಿನಿoದ ಮತ್ತೆ ಕಾಲೆಜುಗಳು ಪನರ ಆರಂಭವಾಗಿವೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಕೊರೋನಾ ಟೆಸ್ಟ ಕಡ್ಡಾಯವಾಗಿದೆ ಆದರೆ ಇದಕ್ಕೆ ಕೆಲ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬ್ಬಾ ಯಾಕೆ ? ಕೋರೋನಾ ಟೆಸ್ಟ ಮಾಡುವುದು ಒಳ್ಳೆಯದು, ಆದ್ರೆ ಯಾಕೆ ಆಕ್ರೋಶ ಯಾಕೆ ವ್ಯಕ್ತಪಡಿಸಿದರು ಗೊತ್ತಾ..? ಹಾಗಾದ್ರೆ ಈ ಸ್ಟೋರಿಯನ್ನು ಒದಲೇ ಬೇಕು. ಕಾಲೇಜು ಪ್ರಾರಂಭವಾದ ಮೊದಲ ದಿನವೆ ಸರ್ಕಾರದ ಹಾಗೂ ಕೆಲವು ಕಾಲೇಜು ಆಡಳಿತ ಮಂಡಳಿಗಳ ವಿರುದ್ಧ ಪೋಷಕರು, ವಿದ್ಯಾರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲ ದಿನ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ ಕಾಲೇಜಿನ ಸಿಬ್ಬಂದಿ ವರ್ಗ ಕೋರೋನ ರಿಪೋರ್ಟ ಕೇಳಿದ್ದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ವಿದ್ಯಾರ್ಥಿನಿಯೊಬ್ಬಳು ಹೇಳಿಕೆ ನಿಡಿದ್ದು ಕಾಲೇಜು ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿನಿಯೊರ್ವಳು ಹರಿಹಾಯ್ದಿದ್ದಾಳೆ. ಕೋವಿಡ್ ಟೆಸ್ಟ್ ಮಾಡಬೇಕು ಎಂದು ಹೇಳುತ್ತಾರೆ ಎಲ್ಲಿಂದ ಮಾಡುವುದು ? ಕೋವಿಡ ಟೆಸ್ಟ್ ಬಗ್ಗೆ ಕಾಲೇಜಿನಲ್ಲಿಯೆ ವ್ಯವಸ್ಥೆ ಮಾಡಬೇಕು ಆದರೆ ಯಾಕೇ ಮಾಡಿಲ್ಲ ದುಡ್ಡಿಲ್ಲದವರು, ಬಡವರು ಎಲ್ಲಿಗೆ ಹೋಗಬೇಕು ಎಂದು ವಿದ್ಯಾರ್ಥಿನಿವೊರ್ವಳು ಪ್ರಶ್ನೇ ಹಾಕಿದ್ದಾಳೆ.

promotions

ಸರ್ಕಾರ ಕೋವಿಡ್ ಟೆಸ್ಟ್ ಪ್ರೀ ಅಂತಾ ಹೇಳುತ್ತೆ, ಆದರೆ ಇಲ್ಲಿ ನೀವೇ ಖಾಸಗಿ ಆಸ್ಪತ್ರೆಗೆ ಹೋಗಿ ರಿಪೋರ್ಟ್ ತೆಗೆದುಕೊಂಡು ಬನ್ನಿ ಅಂತಾ ಹೇಳ್ತಾರೆ ಸಾಕಷ್ಟು ಪ್ರಮಾಣದಲ್ಲಿ ಶುಲ್ಕ್ ತೆಗೆದುಕೊಳ್ತಾರೆ ಆದರೆ ಒಂದು ಕೋವಿಡ್ ಟೆಸ್ಟ್ ಮಾಡುತ್ತಿಲ್ಲ ನಿಮ್ಮ ಮೂಲಕ ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ ದಯವಿಟ್ಟು ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್ ಮಾಡಬೇಕೆಂದು ಸಿಎಂ ಯಡಿಯುರಪ್ಪ ಅವರಿಗೆ ವಿದ್ಯಾರ್ಥಿನಿ ಮನವಿ ಮಾಡಿದ್ದಾಳೆ. ಇನ್ನು ಈ ಬಗ್ಗೆ ಪೋಷಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಕಾಲೇಜುಗಳು ಪ್ರಾರಂಭವಾಗಿವೆ ಎಂದು ಮೆಸೆಜ್ ಬಂದ ಕೂಡಲೇ ನಾವು ಕಾಲೇಜಿಗೆ ಬಂದೆವು ಆದರೆ ಇಲ್ಲಿ ಕೋರೋನಾ ರಿಪೊರ್ಟ ಕೇಳುತ್ತಿದ್ದಾರೆ ಎನು ಮಾಡುವುದು. ನಮ್ಮ ಹತ್ರ ದುಡ್ಡಿಲ್ಲ ಈಗಾಗಲೇ ಕೋರೋನಾ ಹಾವಳಿಯಿಂದ ತತ್ತರಿಸಿದ್ದೆವೆ. ಸರ್ಕಾರವೆ ಇದಕ್ಕೆ ಏನಾದರೂ ಪರಿಹಾರ ನೀಡಬೇಕು ಎಂದು ಪೋಷಕರು ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

promotions

Read More Articles