ಜಮ್ಮು ಕಾಶ್ಮೀರ ಪ್ರದೇಶದಲ್ಲಿ ಸುರಂಗ ಪತ್ತೆ

ಶ್ರೀನಗರ: ಬಿಎಸ್ಎಫ್ ಯೋಧರು ಗಸ್ತು ತಿರುಗುವ ವೇಳೆಯಲ್ಲಿ ಜಮ್ಮು-ಕಾಶ್ಮೀರ ಪ್ರದೇಶದಲ್ಲಿದೊಂದು ಸುರಂಗ ಪತ್ತೆಯಾಗಿದೆ. ಸಾಂಬಾ ಜಿಲ್ಲೆಯಲ್ಲಿ ಈ ಸುರಂಗ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಇದನ್ನು ಭಯೋತ್ಪಾದಕರನ್ನು ಭಾರತದೊಳಗೆ ನುಗ್ಗಿಸುವುದಕ್ಕೆ ಬಳಕೆ ಮಾಡಲಾಗುತ್ತಿತ್ತು.

promotions
logintomyvoice

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಪಾಕಿಸ್ತಾನದ ಕರಾಚಿ ಗುರುತು ಹೊಂದಿರುವ ಮರಳು ಚೀಲಗಳಿಂದ ಸುರಂಗದ ಬಾಯಿಯನ್ನು ಬಲಪಡಿಸಲಾಗಿತ್ತು . ಇದು ಹೊಸದಾಗಿ ಅಗೆದ ಸುರಂಗವಾಗಿದ್ದು, ಇದನ್ನು ಮೊದಲ ಬಾರಿಗೆ ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಭಯೋತ್ಪಾದಕರನ್ನು ಭಾರತದ ಗಡಿಯೊಳಗೆ ನುಗ್ಗಿಸುವುದಕ್ಕಾಗಿ ಸುರಂಗಗಳನ್ನು ಬಳಕೆ ಮಾಡುತ್ತಿದ್ದು, ಆಗಾಗ್ಗೆ ಈ ರೀತಿಯ ಸುರಂಗಗಳು ಪತ್ತೆಯಾಗುತ್ತಿವೆ.

promotions

Read More Articles