ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿರುವ ಕಲ್ಲೂರ ಗ್ರಾಮದಲ್ಲಿ ಏಳು ತಿಂಗಳ ಹೆಣ್ಣು ಮಗುವಿನಲ್ಲಿ ಕೋರೊನಾ ಕಂಡು ಬಂದ ಕಾರಣ ಕಲ್ಲೂರ ಗ್ರಾಮವನ್ನು ಜಿಲ್ಲಾಡಳಿತ ಸಂಪೂರ್ಣ ಸೀಲ್ ಡೌನ್ ಮಾಡಿದೆ. ಗ್ರಾಮಕ್ಕೆ ಪ್ರವೇಶಿಸುವ ಪ್ರಮುಖ ದ್ವಾರ ಬಾಗಿಲು ಬಂದ ಮಾಡಲಾಗಿದ್ದು ಸುತ್ತಲೂ ಬ್ಯಾರಿಕೆಡಗಳನ್ನು ಹಾಕಿ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಈಗಾಗಲೇ ಸೋಂಕಿತ ಮಗುವಿನ ಸಂಬಂಧಿಕರನ್ನು ಜಿಲ್ಲಾಡಳಿತ ಕ್ವಾರೆಂಟೆನ್ ಮಾದಿದ್ದು. ಕಲ್ಲೂರ ಗ್ರಾಮಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮರನಾಥ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಲ್ಲೂರು ಗ್ರಾಮದಲ್ಲಿ ಅಗತ್ಯ ವಸ್ತುಗಳ ಪುರೈಕೆ ಹಾಗೂ ಬಂದೋಬಸ್ತ್ ಕುರಿತು ಮಾಹಿತಿ ಸಂಗ್ರಹ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಮದುರ್ಗ ತಹಶಿಲ್ದಾರ ಗಿರೀಶ್ ಸ್ವಾದಿ ಸೇರಿದಂತೆ ಇತರರು ಹಾಜರಿದ್ದರು.