ಕೃಷಿ ಉತ್ಸವ ಹಿನ್ನಲೆ : ನಗರದಲ್ಲಿ ರೋಟರಿ ಕ್ಲಬ್ ಆಫ್ ಸೆಂಟ್ರಲ್ ನಿಂದ ಬೈಕ್ ರ್ಯಾಲಿ

ಬೆಳಗಾವಿ :

ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆಯ ಸಹಯೋಗದಲ್ಲಿ ರೋಟರಿ ಕ್ಲಬ್ ಆಫ್ ಸೆಂಟ್ರಲ್ ನಿಂದ ಫೆ.7 ರಿಂದ 11ವರಗೆ ಕೃಷಿ ಉತ್ಸವ ಆಯೋಜಿಸಲಾಗಿದೆ. ಇದರ ಪ್ರಯುಕ್ತ ಜನರಿಗೆ ಜಾಗೃತಿ ಮೂಡಿಸಲು ಬೈಕ್ ರ‍್ಯಾಲಿ ನಡೆಸುತ್ತಿದ್ದೇವೆ ಎಂದು ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ಅಧ್ಯಕ್ಷ ಮಂಜುನಾಥ ಅಳವಣಿ ಹೇಳಿದರು,

ಭಾನುವಾರ ಇಲ್ಲಿನ ಸರ್ದಾರ್ ಮೈದಾನದಲ್ಲಿ ಬೆಳಗಾವಿ ಕೃಷಿ ಉತ್ಸವ ನಿಮಿತ್ತಿ ಹಮ್ಮಿಕೊಳ್ಳಲಾಗಿದ್ದ ಬೈಕ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಬೆಳಗಾವಿ ನಗರದ ಜನರಿಗೆ ಹಾಗೂ ರೈತರು ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ಕೃಷಿ ಉತ್ಸವ ಆಯೋಜಿಸಲಾಗಿದೆ. ರೈತರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಕೃಷಿ ಉತ್ಸವ ಆಯೋಜಿಸಲಾಗಿದೆ. ಬೆಳಗಾವಿಯಲ್ಲಿ ಆಯೋಜಿಸಿರುವ ಕೃಷಿ ಉತ್ಸವದಲ್ಲಿ ಸುಮಾರು 200ಕ್ಕೂ ಅಧಿಕ ಮಳಿಗೆಗಳನ್ನು ಹಾಕಲಾಗುತ್ತಿದೆ. ಇದು ಕೇವಲ ಕೃಷಿಗೆ ಸಂಬಂಧಿಸಿದ ವಿಷಯ ಕುರಿತು ರೈತರಿಗೆ ನುರಿತ ತಜ್ಞರಿಂದ ಮಾಹಿತಿ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಯಂತ್ರೋಪಕರಣ, ಆಧುನಿಕ ಯಂತ್ರೋಪಕರಣಗಳು, ಸಿರಿ ಧಾನ್ಯಮೇಳ, ಬೀಜ ಗೋಬ್ಬರಗಳು ಸೇರಿದಂತೆ ರೈತರಿಗೆ ಅನುಕೂಲವಾಗವ ನಿಟ್ಟಿನಲ್ಲಿ ಕೃಷಿಯಲ್ಲಿ ಆದಾಯ ದುಪ್ಪಟ್ಟು ಮಾಡುವ ಸಾಕಷ್ಟು ಮಳಿಗೆಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಕೃಷಿ ಉತ್ಸವದಲ್ಲಿ ರೈತರಿಗಾಗಿ ವಿಶ್ರಾಂತಿ ತಾಣ, ರೈತ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇದರ ಲಾಭವನ್ನು ಜಿಲ್ಲೆಯ ರೈತರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ಆಯೋಜಿಸಿದ್ದ ಬೈಕ್ ರ‍್ಯಾಲಿ ಸರದಾರ ಮೈದಾನದಿಂದ ಆರಂಭವಾಗಿ ನಗರದ ವಿವಿಧ ವೃತ್ತಗಳಲ್ಲಿ ಸಂಚರಿಸಿತು.

ಈ ಸಂದರ್ಭದಲ್ಲಿ ಅಭಯ ಜೋಶಿ, ಶಕೀಲ್ ಶೇಖ್ ಅಲ್ಲಿ, ಮಾಧವಾನಂದ, ವೇಂಕಟೇಶ ನಾಯಕ,ರವಿ ಹತ್ತರಗಿ ಅಭಿನಂದನ ದರಗಶೆಟ್ಟಿ, ದಿನೇಶ ಕಾಳೆ,ಆದರ್ಶ ಮುಚ್ಚಂಡಿ, ಕಿರಣ ಬೆಣಕಟ್ಟಿ ಗಣೇಶ ಬಾತ್ಕಂಡೆ, ಪ್ರಶಾಂತ ಕಂಗ್ರಾಳ್ಕರ್, ಪ್ರಸನ್ನ ದೊಡಮನಿ, ದಾಮೋದರ ಸುತಾರ, ಮನಿಷಾ ಅಳವಣಿ, ಅಸ್ಮಿತಾ ಜೋಶಿ ಸೇರಿದಂತೆ ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ಸದಸ್ಯರು ಉಪಸ್ಥಿತರಿದ್ದರು.

Read More Articles