ಬೆಳಗಾವಿ ಚೈತನಮಾಳನಲ್ಲಿ ರಾಜ ವೀರ ಮದಕರಿ ನಾಯಕರ ನಾಮಫಲಕ ಅನಾವರಣ

ಬೆಳಗಾವಿ

ಬೆಳಗಾವಿ ದಕ್ಷಿಣ ಭಾಗದ ಪೀರಣವಾಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚೈತನಮಾಳ ನಲ್ಲಿ ರಾಜ ವೀರ ಮದಕರಿ ನಾಯಕರ ನಾಮಫಲಕ ಅನಾವರಣ ಮಾಡಲಾಯಿತು .

ರಾಜ ವೀರ ಮದಕರಿ ನಾಯಕರ ಆದರ್ಶ ಜೀವನ ಅವರ ಶೌರ್ಯತನ ಶಕ್ತಿ ಆಲೋಚನೆ ವಿಚಾರಗಳನ್ನು ಪ್ರತಿ ಒಬ್ಬರು ನಮ್ಮ ನಮ್ಮ ಜೀವನಗಳಲ್ಲಿ ಅಳವಡಿಸಿಕೊಂಡು ಒಳ್ಳೆಯ ಮಾದರಿಯ ಕೆಲಸ ಮಾಡಬೇಕಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ನಮ್ಮ ನಗರ ಗ್ರಾಮಗಳ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಅಭಿವೃದ್ದಿ ಮಾಡುವಲ್ಲಿ ಸೌಲಭ್ಯಗಳು ಹಾಗೂ ಹಕ್ಕುಗಳನ್ನು ಪಡೆಯುವಲ್ಲಿ ಪ್ರತಿ ಒಬ್ಬರು ಒಗ್ಗಟ್ಟಾಗಿ ಹೋರಾಟ ಮಾಡವುದು ಅನಿವಾರ್ಯವಾಗಿದೆ . ಎಂದು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ರಾಜ್ಯಾದ್ಯಕ್ಷರು ಮಹೇಶ ಶಿಗೀಹಳ್ಳಿ ರವರು ಯುವಕರಿಗೆ ಜಾಗೃತಿ ಮೂಡಿಸಿದರು.

ಈ ಸಂದರ್ಬದಲ್ಲಿ ಸಂಘಟನೆಯ ಬೆಳಗಾವಿ ನಗರ ಅಧ್ಯಕ್ಷ ಮಂಜು ತಳವಾರ್ ಹಾಗೂ ಪ್ರಧಾನ ಸಂಚಾಲಕ ಸಾಗರ್ ಮತ್ತು ಹಿರಿಯರು ಯುವಕರು ಉಪಸ್ಥಿತರಿದ್ದರು.

Read More Articles