ಅ.18 ಬೇಡಜಂಗಮರಿಂದ ವಿಧಾನಸೌಧ ಚಲೋ: ನೀರಲಗಿಮಠ

ಬೆಳಗಾವಿ: ಬೇಡಜಂಗಮರು ಕರೆ‌ ನೀಡಿರುವ ವಿಧಾನಸೌಧ ಚಲೋ ಕಾರ್ಯಕ್ರಮಕ್ಕೆ‌ ಬೆಳಗಾವಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ಸದಸ್ಯ ವೀರಪಾಕ್ಷಯ್ಯ ನೀರಲಗಿಮಠ ಕರೆ ನೀಡಿದ್ದಾರೆ.

promotions

ಅ.12 ರಂದು ಬೇಡಜಂಗಮ ವಿಷಯದ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಸಭೆಯನ್ನು ಕರದಿದ್ದು ಸಮುದಾಯ ಬಾಂಧವರಿಗೆ ತಿಳಿದ ವಿಷಯವೇ ಆ ದಿನಾಂಕದಂದು ಸಮಸ್ತ ಬೇಡಜಂಗಮ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ಬರಬಹುದು ಎಂದು ನಿರೀಕ್ಷಿದ್ದೆವು ಆದರೆ ಈ ಬಿ ಜೆ ಪಿ ಸರ್ಕಾರವು ಸಮಸ್ತ ಬೇಡಜಂಗಮರಿಗೆ ಅನ್ಯಾಯ ಮಾಡುವದರ ಮೂಲಕ ದಿ:12/10/2022 ರಂದು ನೆಡೆಯಬೇಕಿದ್ದ ಸಭೆಯನ್ನು ರದ್ದು ಗೊಳಿಸಿ ಮುಂದೆ ದಿನಾಂಕವನ್ನು ತಿಳಿಸುತ್ತವೆ ಎಂಬ ಸಮಾಜ ಕಲ್ಯಾಣ ಸಚಿವರ ಕಾರ್ಯದರ್ಶಿಗಳು ಆದೇಶದ ಪತ್ರವನ್ನು ಹೊರಡಿಸುವ ಮುಖಾಂತರ ನಮ್ಮ ಸತ್ಯ ಪ್ರತಿಪಾದನೆಯ ಸತ್ಯಾಗ್ರಹವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಈ‌ ಹಿನ್ನೆಲೆಯಲ್ಲಿ ಅ. 18 ರಂದು ವಿಧಾನ ಸೌಧ ಚಲೋ ಕಾರ್ಯಕ್ರಮಕ್ಕೆ ಬೆಳಗಾವಿಯಿಂದ ‌ಹೆಚ್ಚಿನ ಸಂಖ್ಯೆಯಲ್ಲಿ ಜಂಗಮರು ಆಗಮಿಸಬೇಕೆಂದು ಕರೆ ನೀಡಿದ್ದಾರೆ.

promotions

ಫ್ರೀಡಂಪಾರ್ಕ ನಲ್ಲಿ ಸತ್ಯಾಗ್ರಹ 101 ನೆಯ ದಿನದಂದಿರುವ ಕಲ್ಯಾಣ ಶ್ರೀಗಳ ಸಾನಿಧ್ಯದಲ್ಲಿ ಕುಳಿತಿರುವ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಬಿ ಡಿ ಹಿರೇಮಠ ಇವರು ರಾಜ್ಯದಲ್ಲಿರುವ ಸಮಸ್ತ ಬೇಡಜಂಗಮ ಸಮುದಾಯಕ್ಕೆ ದಿನಾಂಕ:-12/10/2022 ರಂದು ಗೊಳಿಸಿ ಹೊರಡಿಸಿದ ಆದೇಶದ ವಿರುದ್ಧ ದಿನಾಂಕ:- 18/10/2022 ರಂದು ವಿಧಾನ ಸೌಧ ಚಲೊ ಆತ್ಮ ಆರ್ಪಣೆಗೆ ಸಿದ್ದರಾಗಬೇಕೆಂದು ಸತ್ಯ ಪ್ರತಿಪಾದನಾ ಸತ್ಯಾಗ್ರಹದಲ್ಲಿ ನಿರ್ಣಯವನ್ನು ತೆಗೆದುಕೊಂಡಿದ್ದು ಅಂದಿನ ದಿನದಂದು ಕರ್ನಾಟಕದ ಬೇಡಜಂಗಮ ಸಮಾಜ ಬಾಂಧವರು ಹಾಗೂ ಪಂಚ ಪೀಠಾಧಿಶ್ವರರ ಒಳಗೊಂಡು ನಾಡಿನ ಪೂಜ್ಯ ಮಠಾಧೀಶ್ವರರು ಬೆಂಗಳೂರಿಗೆ ಬರುವುದಕ್ಕೆ ಸ್ಪಷ್ಟವಾದ ಸಂದೇಶವನ್ನು ನೀಡಿದ್ದಾರೆ.

Read More Articles