ಜಲಕುಂಭ ಕಾಮಗಾರಿಯ ಜೆಸಿಬಿ ಬಡಿದು 3 ವರ್ಷದ ಬಾಲಕಿ ಸಾವು

ಚಿಕ್ಕೋಡಿ : ತಾಲೂಕಿನ‌ ಕಬ್ಬೂರ ಗ್ರಾಪಂ ವ್ಯಾಪ್ತಿಯ  ತೋಟವೊಂದರಲ್ಲಿ ಜಲಕುಂಭ ನಿರ್ಮಾಣದ ಕಾಮಗಾರಿಯ ಜೆಸಿಬಿ ಬಡಿದು 3 ವರ್ಷದ ಬಾಲಕಿಯೋರ್ವಳು ಸಾವನ್ನಪ್ಪಿದ ಘಟನೆ ನಡೆದಿದೆ.

promotions

ಕಳೆದ ಶುಕ್ರವಾರ ಘಟನೆ ಜರುಗಿದ್ದು, ಕುಟುಂಬಸ್ಥರ ಆಕ್ರಂದನ‌ ಮುಗಿಲು ಮುಟ್ಟಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಸೌಜನ್ಯಕ್ಕಾಗಿ ಸಹ ಯಾವುದೇ ಅಧಿಕಾರಿಗಳು ಮೃತ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳದ ಹಿನ್ನಲೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. 

promotions

ಆಕಂದ್ರನ ಆಲಿಸದ ತಾಲೂಕಾಡಳಿತ, ಗ್ರಾಪಂನಿಂದ ನ್ಯಾಯ ದೊರಕಿಸಿ ಕೊಡುವಂತೆ ಮಾಧ್ಯಮಗಳಿಗೆ ಮನವಿ ಮಾಡುತ್ತಿರುವ ಮೃತ ಬಾಲಕಿಯ ಪೋಷಕರು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.

Read More Articles