ಪಂಚಾಯತಿ ನಿರ್ಲಕ್ಷ್ಯ ಅಪಾಯದಿಂದ ಪಾರಾದ ಮಗು
- shivaraj bandigi
- 21 Jun 2024 , 4:24 PM
- Chikodi
- 14595
ಚಿಕ್ಕೋಡಿ : ಸರ್ಕಾರಿ ಶಾಲಾ ಆವರಣದಲ್ಲಿ ತೊಡಿದ ಗುಂಡಿ ಮುಚ್ಚದೇ ಬಿಟ್ಟಿದ್ದರಿಂದ

ಆವರಣದಲ್ಲಿ ಆಟವಾಡುತ್ತಿದ್ದ ಬಾಲಕನೋರ್ವ ನೀರು ಪಾಲಾಗುವದರಿಂದ ಬಚಾವಾದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ನಡೆದಿದೆ.

ಸರ್ಕಾರಿ ಶಾಲಾ ಆವರಣದಲ್ಲಿ ಗುಂಡಿ ತೋಡಿ ಮುಚ್ಚದೆ ಹಾಗೇ ಬಿಟ್ಟಿರುವದರಿಂದ ಆಟವಾಡುತ್ತಿದ್ದ ಬಾಲಕ ಗುಂಡಿಗೆ ಬಿದ್ದಿದ್ದಾನೆ ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ನೀರು ಪಾಲಾಗುತ್ತಿದ್ದ ಬಾಲಕನನ್ನು ಪಾರು ಮಾಡಿದ್ದಾರೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದಂತಾಗಿದೆ.
ಗ್ರಾಮ ಪಂಚಾಯತಿಯ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆಂದು ಗ್ರಾಮಸ್ಥರು ಆರೋಪಿಸಿದರಲ್ಲದೆ ಗುಂಡಿ ಮುಚ್ಚುವಂತೆ ಪಂಚಾಯತಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.










