ಬೆಳಗಾವಿ ಜಿಲ್ಲೆಯ ಖ್ಯಾತ ಉದ್ಯಮಿ ಇನ್ನಿಲ್ಲ
- shivaraj bandigi
- 6 Apr 2024 , 9:48 PM
- Belagavi
- 567
ಬೈಲಹೊಂಗಲ : ತಾಲೂಕಿನ ಸಂಪಗಾವಿ ಗ್ರಾಮದ ಗಣ್ಯ ಮನೆತನದ ಶಿವಕಾಂತ ಸಿದ್ನಾಳ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

49 ವಯಸ್ಸಿನ ಅವರು ಚಿಕ್ಕಂದಿನಿಂದಲೇ ವ್ಯಾಪಾರ ವಹಿವಾಟಿನಲ್ಲಿ ಆಸಕ್ತಿ ಹೊಂದಿ ವಿಜಯಕಾಂತ ಡೈರಿ ಸ್ಥಾಪಿಸಿ, ಸಾವಿರಾರು ನಿರೂದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದ್ದರು. ಆದಿತ್ಯ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮೂಲಕ ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ ಈಡಿ ರಾಜ್ಯಕ್ಕೆ ಹೆಸರುವಾಸಿಯಾಗಿದ್ದರು.

ಮಾಜಿ ಸಂಸದ ಎಸ್.ಬಿ.ಸಿದ್ನಾಳ ಅವರ ಪುತ್ರ, ವಿಜಯ ಸಂಕೇಶ್ವರ ಅಳಿಯನಾಗಿರುವ ಶಿವಕಾಂತ ಅವರು ಬೆಳಗಾವಿ ಜಿಲ್ಲೆಯಲ್ಲಿ ಹೆಸರುವಾಸಿಯಾದ ಪಾರ್ಲೆ ಬಿಸ್ಕಿಟ್ ತಯಾರಿಕಾ ಘಟಕ ಸ್ಥಾಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ವರದಿ : ರವಿಕಿರಣ್ ಯಾತಗೇರಿ










