ನೀರಿನ ಕ್ಯಾನ್ ಒಳಗೆ ರೈತೋಪಕರಣವನ್ನು ಜೋಡಣೆ ಮಾಡಿದ ರೈತ
- Krishna Shinde
- 14 Jan 2024 , 5:24 AM
- Belagavi
- 241
ಅಥಣಿ :ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ "ಗುಂಡು ಬಸಪ್ಪಾ ಕಂಬಾರ್" ಎಂಬ ರೈತ ಯುವಕ ಕೃಷಿ ಚಟುವಟಿಕೆಗಳಿಗೆ ಬಳಸುವ ಕಟ್ಟಿಗೆಯಿಂದ ತಯಾರಿಸಿದ ರೈತೋಪಕರಣದ ಮಾದರಿ ಉಪಕರಣಗಳನ್ನು ನೀರಿನ ಬಾಟಲ್ ನಲ್ಲಿ ತಯಾರಿಸಿ ಪ್ರದಶನಕ್ಕೆ ಇಟ್ಟಿದ್ದಾರೆ.

ವಿಶೇಷ ಏನೆಂದರೆ 20 ಲೀ. ನೀರಿನ ಕ್ಯಾನ್ ಬಳಸಿಕೊಂಡು ಕ್ಯಾನ್ ಕಟ್ ಮಾಡದೇ ರೈತೋಪಕರಣದ ಒಂದು ಸಣ್ಣ ಮಾದರಿ ಉಪಕರಣವನ್ನು ನೀರಿನ ಕ್ಯಾನ್ ಒಳಗೆ ಜೋಡಣೆ ಮಾಡಿದ್ದಾರೆ.

ಮಕ್ಕಳಿಗೆ ಆಟಿಕೆ ಸಾಮಾನುಗಳಾಗಿ ಎಲ್ಲವೂ ಸಿಗುತ್ತವೆ ಯಂತ್ರೋಪಕರಣಗಳ ಅರಿವು ಮಕ್ಕಳಿಗಿದೆ ಆದರೆ ರೈತ ಎತ್ತುಗಳಿಂದ ಭೂಮಿ ಊಳುವ ರೈತೋಪಕರಣಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ತರಹದ ಮಾದರಿ ಬಾಟಲ್ ಉಪಕರಣಗಳನ್ನು ಮಾಡಿ ನಾಳಿನ ಮಕ್ಕಳಿಗೆ ತೋರಿಸುವ ಉದ್ದೇಶ ಇದಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.










