ಮಹಾನ ಪರಿವರ್ತನೆಗಾರರೆಂದರೆ ಅವರು ಶ್ರೀ ವಾಲ್ಮೀಕಿ ಮಹರ್ಷಿಯವರು : ಸರ್ವೋತ್ತಮ ಜಾರಕಿಹೊಳಿ
- 15 Jan 2024 , 1:33 AM
- Bengaluru
- 137
ಗೋಕಾಕ : ಜೀವನದಲ್ಲಿ ಪರಿವರ್ತನೆ ಎನ್ನುವುದು ಬಹು ಮುಖ್ಯವಾದ ಸಂಗತಿಯಾಗಿದೆ. ಪರಿವರ್ತನೆಯ ಹರಿಕಾರನಾಗಿ ಸಮಾಜಕ್ಕೆ ವಾಲ್ಮೀಕಿ ಸಮುದಾಯದ ದಿವ್ಯ ಕೊಡುಗೆ ನೀಡಿದ್ದಾರೆ ಎಂದು ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್ ನ ನಿರ್ದೇಶಕರಾದ ಸರ್ವೋತ್ತಮ ಜರಕಿಹೊಳಿ ಅವರು ಹೇಳಿದರು.

ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದಲ್ಲಿ ರವಿವಾರ (ಅ.09) ರಂದು ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ಯ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹರ್ಷಿ ಶ್ರೀ ವಾಲ್ಮೀಕಿಯವರು ಸಾಮಾನ್ಯ ಮಾನವರಾಗಿ ಜನಿಸಿ, ಜ್ಞಾನದ ಮೂಲಕ ಅಸಾಧಾರಣ ದಿವ್ಯಶಕ್ತಿಯನ್ನು ದೇವರಸ್ಥಾನ ಪಡೆದ ಮಹಾನ ವ್ಯಕ್ತಿಯಾಗಿದ್ದಾರೆ .
ವಾಲ್ಮೀಕಿ ಮಹರ್ಷಿಯವರು ಒಂದು ಸಮಾಜಕ್ಕೆ ಶೀಮಿತವಾಗದೆ ಎಲ್ಲ ಧರ್ಮದವರು ಅವರ ಸಿದ್ದಾಂತಗಳನ್ನು ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಗೆ ಅರ್ಥವನ್ನು ನೀಡದಂತಾಗುತ್ತದೆ ಎಂದು ಸರ್ವೋತ್ತಮ ಜಾರಕಿಹೊಳಿ ಅವರಸಹಕರಿಸಬೇಕು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಲಗೋಡ ಪೊಲೀಸ್ ಠಾಣೆಯ ಪಿ.ಎಸ್.ಐ ಜಿ.ಎಸ್.ಪಾಟೀಲ ಅವರು ಮಾತನಾಡಿ ವಾಲ್ಮೀಕಿ ಜಯಂತಿ ಒಂದೇ ದಿನ ಆಚರಣೆ ಮಾಡದೇ, ಅವರನ್ನು ಭಕ್ತಿ ಪೂರ್ವಕವಾಗಿ ಪೂಜೆ ಮಾಡಿ ಅವರು ನೀಡಿದ ಜೀವನ ಪಾಠವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅವರು ಬರೆದ ರಾಮಾಯಣವು ಜೀವನದ ಸಾರವನ್ನು ನೀಡಿದೆ. ಅಣ್ಣಾ ತಮ್ಮನ ಮಹತ್ವ, ದಂಪತಿಗಳು ಯಾವ ರೀತಿ ಅನ್ಯೂನ್ಯತೆಯಿಂದ ಸಂಸಾರ ನಡೆಸಬೇಕು ಎನ್ನುವ ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಜೀವನ ಸಾರವನ್ನು ನೀಡಿದ್ದಾರೆ ಮಎಂದರು.
ಇಡೀ ಲೋಕಕ್ಕೆ ಪಾಠ ಹೇಳುವ ಮೂಲಕ ಅವರು ಲೋಕವ್ಯಕ್ತಿಯಾಗಿದ್ದಾರೆ. ವಾಲ್ಮೀಕಿ ಮಹರ್ಷಿಗಳು ತೋರಿದ ಮಾರ್ಗದಲ್ಲಿ ಎಲ್ಲರು ಸಾಗೋನಾ ಎಂದರು.
ಕಬ್ಬು ಬೆಳಗಾರರಿಗೆ ಸೂಚನೆ :ಕಬ್ಬು ಬೆಳಗಾರರು ಕಟಾವು ಮಾಡುವಾಗ ಬೇರೆ ರಾಜ್ಯದವರು ಮೊಸ ಮಾಡುತ್ತಿದ್ದಾರೆ ಎಂದು ನಮ್ಮ ಗಮನಕ್ಕೆ ಬಂದಿದ್ದು ರೈತರು ಇದರ ಬಗ್ಗೆ ಗಮನ ಹರಿಸಬೇಕು ನಂತರ ಕೋರ್ಟ ಕಛೇರಿಯ ಸುತ್ತುವಂತಾಗಬಾರದು ಎಂದರು.
ಟ್ರಾಕ್ಟರ್ ವಾಹನದವರು ಕಬ್ಬಿನ ಡೆಬ್ಬಿಗೆ ರೆಡ್ ಲೈಟ್ ಗಳನ್ನು ಹಚ್ಚಬೇಕು. ಸಾಂಗ್ ಹಚ್ಚುವುದನ್ನು ಸಹ ಸ್ವಲ್ಪ ಕಡಿಮೆ ಸೌಂಡ್ ಇಡಬೇಕು ಇದರಿಂದ ಸಾವುನೋವುಗಳನ್ನು ತಡೆಯಲು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಕುಲಗೋಡ ಪೊಲೀಸ್ ಠಾಣೆಯ ಪಿ.ಎಸ್.ಐ ಜಿ.ಎಸ್.ಪಾಟೀಲ ಅವರು ಹೇಳಿದರು.
ತಳಕಟನಾಳ ಗ್ರಾಮ ಪಂಚಾಯತಿ ಸದಸ್ಯರು, ತಾಲೂಕಾ ಪಂಚಾಯತ್ ಸದಸ್ಯರು, ಊರ ಎಲ್ಲ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.
ಕೇವಲ ವಾಲ್ಮೀಕಿ ಸಮುದಾಯದವರ ಹಬ್ಬ ಎಂದು ಆಚರಣೆ ಮಾಡದೇ ಊರ, ನಾಡ ಹಬ್ಬ ಎನ್ನುವ ರೀತಿಯಲ್ಲಿ ಊರಿನ ಎಲ್ಲ ಸಮುದಾಯದವರ ಹುಮ್ಮಸಿನಿಂದ ಕಾರ್ಯಕ್ರನದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.










