ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ವೈದ್ಯನಿಗೆ ಬಿತ್ತು ಸಂಬಂಧಿಕರಿಂದ ಗೂಸಾ
- shivaraj B
- 2 Aug 2024 , 4:10 PM
- Chikodi
- 7649
ಚಿಕ್ಕೋಡಿ : ಅಪ್ರಾಪ್ತ ಬಾಲಕಿಯ ಮೇಲೆ ವೈದ್ಯನೊಬ್ಬ ಲೈಂಗಿಕ ಕಿರುಕುಳ ಎಸಗಿದ್ದಾನೆಂದು ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ, ಬಾಲಕಿಯ ಸಂಬಂಧಿಕರು ವೈದ್ಯನಿಗೆ ಗೂಸಾ ಕೊಟ್ಟ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಹುಕ್ಕೇರಿ ಪಟ್ಟಣದ ವೈದ್ಯ ಮುತ್ತುರಾಜ ಹೂಗಾರ ಎಂಬ ವೈದ್ಯನಿಂದ ಅನ್ಯ ಕೋಮಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿದ ಬಾಲಕಿಯ ತಂದೆ ಹಾಗೂ ಸಂಬಂಧಿಕರಿಂದ ವೈದ್ಯನ ಮೇಲೆ ಹಲ್ಲೆ ನಡೆಸಲಾಗಿದೆ.

ಹುಕ್ಕೇರಿ ಪಟ್ಟಣದಲ್ಲಿ ಸುರಕ್ಷಾ ಹೆಸರಿನಲ್ಲಿ ಹೊಮಿಯೋಪತಿಕ್ ಆಸ್ಪತ್ರೆ ನಡೆಸುತ್ತಿದ್ದ ಆದರೆ ಹೊಮಿಯೋಪತಿ ಹೆಸರಿನಲ್ಲಿ ಆಲೋಪತಿ ಚಿಕಿತ್ಸೆ ನೀಡುತ್ತಿದ್ದ ಎನ್ನಲಾಗಿದೆ.
ಬಾಲಕಿಗೆ ಚಿಕಿತ್ಸೆ ನೀಡುವ ಹೆಸರಿನಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಬಾಲಕಿಯು ತನ್ನ ಮನೆಯವರ ಮುಂದೆ ಅಳುತ್ತಾ ಘಟನೆ ಕುರಿತು ವಿವರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಿಷಯ ತಿಳಿದ ಬಾಲಕಿಯ ಸಂಬಂಧಿಕರಿಂದ ವೈದ್ಯ ಮುತ್ತುರಾಜ ಮೇಲೆ ಹಲ್ಲೆ ನಡೆಸಲಾಗಿದ್ದು, ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










