ಕೃಷ್ಣಾ ನದಿಯಲ್ಲಿ ಓರ್ವ ನಾಪತ್ತೆ
- shivaraj B
- 8 Aug 2024 , 12:10 PM
- Athani
- 589
ಅಥಣಿ : ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಬಾಳಾಸಾಹೇಬ ಚವ್ಹಾಣ್ (೪೮) ಕೃಷ್ಣಾ ನದಿಯಲ್ಲಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಸತೀಶ್ ಶಾಮರಾವ್ ಚೌಹಾನ್ ಹಾಗೂ ಬಾಳಾಸಾಹೇಬ, ಕೃಷ್ಣಾ ನದಿಯ ಪ್ರವಾಹಕ್ಕೆ ತಮ್ಮ ಸ್ವತಃ ಮನೆ ನೀರಲ್ಲಿ ಮುಳುಗಿತ್ತು. ಇವತ್ತು ನೀರಿನ ಪ್ರಮಾಣ ಇಳಿಕೆ ಆಗಿರುವುದರಿಂದ ಮನೆ ನೋಡಿ ಬರಲಿಕ್ಕೆ ತೆರಳಿದ್ದರು. ಶಾಮರಾವ ಚವ್ಹಾಣ್ ಸ್ವಲ್ಪ ಮುಂದೆ ಹೋಗಿದ್ದರು ಸ್ವಲ್ಪ ಅನಂತರದ ದೂರದಲ್ಲಿದ್ದ ಬಾಳುಸಾಹೇಬ ಚವ್ಹಾಣ್ ಏಕಾಏಕಿ ಕೃಷ್ಣಾ ನದಿಯ ನೀರಿನಲ್ಲಿ ಕಾಣೆಯಾಗಿದ್ದಾರೆ. ಸುಮಾರು ಹೊತ್ತು ಹುಡುಕಾಟ ನಡೆಸಿದರು ಪತ್ತೆಯಾಗದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಆಗಮಿಸಿದ ಅಥಣಿ ಪಿ ಎಸ್ ಐ ಶಿವಾನಂದ ಕಾರೋಜೊಳ್ ಹಾಗೂ ಸಿಬ್ಬಂದಿ,ಅಗ್ನಿಶಾಮಕ ದಳ, ಬೋಟ್ ದೊಂದಿಗೆ ಶೋಧ ಕಾರ್ಯ ನಡೆಸಿದ್ದಾರೆ. ಸಾಯಂಕಾಲ ನಾಲ್ಕು ಘಂಟೆಗೆ ಘಟನೆ ನಡೆದಿದ್ದು, ಸತತ ಮೂರು ಘಂಟೆಯ ಶೋಧ ಕಾರ್ಯ ನಡೆಸಿದರು ಇನ್ನೂ ಪತ್ಯೆಯಾಗಿಲ್ಲ. ಕೃಷಾ ನದಿಯಲ್ಲಿ ಮೊಸಳೆಗಳ ಓಡಾಟ ಹೆಚ್ಚಾಗಿದ್ದು ಮೊಸಳೆ ದಾಳಿ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ.

ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ..










