ನಿಯಂತ್ರಣ ತಪ್ಪಿ ಉರುಳಿದ ಶಾಲಾ ವಾಹನ : ತಪ್ಪಿದ ಭಾರಿ ಅನಾಹುತ

ಬೈಲಹೊಂಗಲ :ಟಾಟಾ ಮ್ಯಾಜಿಕ್ ವಾಹನದಲ್ಲಿ 37 ಮಕ್ಕಳನ್ನು ಹಾಕಿಕೊಂಡು ತೆರಳುತ್ತಿದ್ದ ಶಾಲಾ ವಾಹನ ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

promotions

ಬೈಲಹೊಂಗಲ‌ದ  ಮರಕುಂಬಿಯಲ್ಲಿರುವ ಗಣಾಚಾರಿ ಶಿಕ್ಷಣ ಸಂಸ್ಥೆಯ ಶಾಲೆಗೆ ಸೇರಿದ ವಾಹನವಾಗಿದ್ದು ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸಿದ್ದ ಎಂದು ಆರೋಪಿಸಲಾಗಿದೆ.

promotions

ಸ್ಥಳಕ್ಕೆ ಓಡಿ ಹೋಗಿ ಮಕ್ಕಳನ್ನು ರಕ್ಷಿಸಿದ ಸ್ಥಳೀಯರು ಸಣ್ಣ ಪುಟ್ಟ ಗಾಯಗಳೊಂದಿಗೆ 37 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಾಹನ ಬದಲಾಯಿಸಿ ಎಂದು ಪೋಷಕರು ಕೇಳಿಕೊಂಡರು  ಶಾಲೆ ಆಡಳಿತ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಪೋಷಕರು ಕಿಡಿ ಕಾರಿದ್ದಾರೆ.

Read More Articles