ಗಡಿ ಶಾಲೆಗೆ ಮಲತಾಯಿ ಧೋರಣೆ ಶಿಕ್ಷಣ ಇಲಾಖೆ ವಿರುದ್ಧ ಗಂಭೀರ ಆರೋಪ

ಅಥಣಿ : ಖಾಸಗಿ ಶಾಲೆಗಳಿಗೆ ಮಾದರಿಯಾದ ಸರ್ಕಾರಿ ಶಾಲೆಗೆ ಅಧಿಕಾರಿಗಳು ನಿರ್ಲಕ್ಷ ತೋರಿದ ಆರೋಪ ಕೇಳಿಬಂದಿದೆ.

promotions

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾವಂಶಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ  ಸನದಿ ತೋಟದ ಶಾಲೆಗೆ ಸುಮಾರು ಏಳು ವರ್ಷಗಳಿಂದ ಖಾಯಂ ಶಿಕ್ಷಕರ  ಕೊರತೆ ಕಾಡುತ್ತಿದೆ.

promotions

ಸುಮಾರು ೧೫೦ ಕ್ಕು ಅಧಿಕ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದರು ಅತಿಥಿ ಶಿಕ್ಷಕರನ್ನ ನೀಡಲು ಕ್ಷೇತ್ರ ಶಿಕ್ಷಣಾಧಿಕರು ಹಿಂದೇಟು ಹಾಕಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ತಡೆ ಒಡ್ಡಿದಂತೆ ಮಾಡಲಾಗಿದೆ ಎಂದು ಪಾಲಕರು ಗಂಭೀರ ಆರೋಪ ಮಾಡಿದ್ದಾರೆ.

ಸರ್ಕಾರಿ ಶಾಲೆಗೆ ಕೋಠಡಿ ಸಮಸ್ಯೆ ಎದುರಾದಾಗ ಗ್ರಾಮಸ್ಥರು ಹಾಗೂ ಶಾಲೆಯ ಶಿಕ್ಷಕರು ಸ್ವಂತ ಖರ್ಚಿನಲ್ಲಿ ಕಟ್ಟಡ ನಿರ್ಮಾಣ ಮಾಡಿ ಶಾಲಾ ಮಕ್ಕಳಿಗೆ  ಖಾಸಗಿ ವಾಹನ ಸೌಲಭ್ಯ, ಶಿಕ್ಷಕರ ಕೊರತೆ ನಿಗಿಸಲು ಸ್ವಂತ ಖರ್ಚಿನಲ್ಲೇ ಅತಿಥಿ ಶಿಕ್ಷಕರ ವೇತನ ಭರ್ತಿ ಮಾಡಿ ಸರ್ಕಾರಿ ಶಾಲೆಗೆ ಉತ್ತಮ ಕೊಡುಗೆ ನೀಡಿದ ಕೀರ್ತಿ ತಾಂವಶಿ ಗ್ರಾಮಸ್ಥರದ್ದಾಗಿದೆ.

ಸರ್ಕಾರಿ ಶಾಲೆಗೆ ಇಷ್ಟೆಲ್ಲ  ಕೊಡುಗೆ ನೀಡಿದ ಗ್ರಾಮಸ್ಥರಿಗೆ ಅಧಿಕಾರಿಗಳು ಮೆಚ್ಚುಗೆ ಇರಲಿ..!ಶಾಲೆಯ ಬಗ್ಗೆ ಮತ್ತೆ ನಿರ್ಲಕ್ಷ ತೋರಿದ್ದಾರೆ ೨೦೨೩-೨೪ ರ  ಜಿಪಿಟಿ ಶಿಕ್ಷಕರ ನೇಮಕಾತಿಯಲ್ಲಿ ಸನದಿ ತೋಟದ ಸರ್ಕಾರಿ ಶಾಲೆಗೆ ಒಬ್ಬ ಖಾಯಂ ಶಿಕ್ಷಕರನ್ನು ನೇಮಕಾತಿ ಮಾಡದೆ ದೂಶಿಸಿದ್ದಾರೆ ಎಂದು ಶಿಕ್ಷಣ ಇಲಾಖೆ ವಿರುದ್ಧ ಪಾಲಕರು ಗಂಭೀರ ಆರೋಪ ಮಾಡಿದ್ದಾರೆ.

ಗಡಿ ಭಾಗದಲ್ಲಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿ ಬರಿ
ಬಾಯಿಮಾತಿಗೆ ಸಿಮಿತವಾಯ್ತಾ  ಅನ್ನೋ ಮಾತು ಕೇಳಿಬರುತ್ತಿವೆ ಆದಷ್ಟು ಬೇಗ ಶಾಲೆಗೆ ಖಾಯಂ ಶಿಕ್ಷಕರ ನೇಮಕಾತಿ ಮಾಡಿ ಇಲ್ಲದೆ ಹೋದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಪಾಲಕರು ಎಚ್ಚರಿಕೆ ನೀಡಿದ್ದಾರೆ.

Read More Articles