ಮಣ್ಣಲ್ಲಿ ಮಣ್ಣಾದರೂ ಮರೆಯಲಾರದ ದ್ವನಿ
- shivaraj B
- 13 Jul 2024 , 12:07 AM
- Bailhongal
- 442
ಬೈಲಹೊಂಗಲ : ಜೀವನದ ಪಯಣ ಮುಗಿಸಿದ ಅಪರ್ಣ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅವರ ದ್ವನಿ ನಮ್ಮ ಮೆಟ್ರೋ ಇರುವರೆಗೂ ಜೀವಂತ.

ಸ್ಪಷ್ಟ ಸ್ಟಟಿಕದ ಅವರ ಅಚ್ಚ ಕನ್ನಡ ನುಡಿ ಜನಮಾನಸದಲ್ಲಿ ಅಜರಾಮರ. ಮಸಣದ ಹೂವಾಗಿ ಮಸಣ ಸೇರಿದ ಅಪ್ಪಟ ಕನ್ನಡತಿ ಅಪರ್ಣ. ಅವರ ಕಂಚಿನ ಕಂಠದಿಂದ ಉಚ್ಚಾರವಾಗುವ ಕನ್ನಡದ ಶಬ್ದಗಳು, ಇಂದು ಮಾತು ನಿಲ್ಲಿಸಿವೆ. ಅರಳು ಹುರಿದಂತೆ ಮಾತನಾಡುವ ಅವರ ಶೈಲಿ, ನಿರಂತರವಾದ 8 ಗಂಟೆಗಳ ಕಾಲದ ನಿರೂಪಣೆ ದಾಖಲೆಯ ಮಟ್ಟಕ್ಕೆ ಕರೆದೊಯ್ದ ರೀತಿ ಮಾತ್ರ ಅನನ್ಯ.

ಸ್ವಚ್ಛ ಮನಸಿನ ಅಪ್ಪಟ ಕನ್ನಡತಿಯ ಕಳೆದುಕೊಂಡ ನಾಡು ನಿಜವಾಗಿ ಇಂದು ಬಡವನಾಗಿ ನಿಂತಿದೆ.
ವರದಿ : ರವಿಕಿರಣ್ ಯಾತಗೇರಿ










