ರಸ್ತೆ ಅಪಘಾತ ಮಹಿಳೆ ಹಾಗೂ ಪಾದಚಾರಿಗೆ ಗಂಭೀರ ಗಾಯ
- shivaraj bandigi
- 13 Jan 2024 , 4:22 PM
- Belagavi
- 343
ಅಥಣಿ: ಸಂಬರಗಿ ಗ್ರಾಮದ ಹೊರವಲಯದಲ್ಲಿ ದ್ವಿಚಕ್ರವಾಹನ ಹಾಗೂ ಪಾದಚಾರಿ ಮಧ್ಯೆ ರಸ್ತೆ ಅಪಘಾತ ಓರ್ವ ಮಹಿಳೆ ಸೇರಿ ಪಾದಚಾರಿಗೆ ಗಂಭೀರ ಗಾಯ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹನಮಾಪುರ ಗ್ರಾಮದ ಪಾದಾಚಾರಿ ಮಹಾರಾಷ್ಟ್ರದ ಅರೆವಾಡಿಯ ಬೀರಪ್ಪ ದೇವರ ದರ್ಶನಕ್ಕೆ ಕಾಲ್ನಡಿಗೆ ಮೂಲಕ ಸಾಗುತ್ತಿರುವ ವೇಳೆ ಇಂದು ಸಾಯಂಕಾಲ ಏಳು ಗಂಟೆಯ ಸುಮಾರಿಗೆ ಅಥಣಿ ಸಂಬರಗಿ ಮಾರ್ಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನ ಸಂಬರಗಿ ಗ್ರಾಮದ ಹೊರವಲಯದಲ್ಲಿ ಅತಿ ವೇಗವಾಗಿ ಬಂದ ದ್ವಿಚಕ್ರ ವಾಹನ ಗುದ್ದಿದ ಪರಿಣಾಮ ದಿಂದ ಪಾದಚಾರಿಯ ಎಡಗಾಲಿನ ಮೂಳೆ ಮುರಿದು ಹೋಗಿದ್ದು ಪಾದಚಾರಿಯ ತಲೆಗೆ ಗಂಭೀರ ಗಾಯವಾದ ಪರಿಣಾಮ ದಿಂದ ಆತನ ಸ್ಥಿತಿ ಚಿಂತಾ ಜನಕವಾಗಿ ಮತ್ತು ಬೈಕ್ ಸವಾರನ ಹಿಂಬದಿಗೆ ಕುಳಿತಿರುವ ಮಹಿಳೆಗೆ ಗಂಭೀರ ಗಾಯವಾಗಿ ಇಬ್ಬರ ಸ್ಥಿತಿಯು ಚಿಂತಾ ಜನಕವಾಗಿದ್ದು ಕೂಡಲೇ 108 ಸಹಾಯವಾಣಿ ಅಂಬುಲೆನ್ಸ್ ಗೆ ಕರೆ ಮಾಡಿ ಸರಿಸುಮಾರು ಅರ್ಧ ಗಂಟೆಯ ವರೆಗೆ ದಾರಿಕಾದರೂ ಅಂಬುಲೆನ್ಸ್ ವಿಳಂಬವಾದ ಪರಿಣಾಮದಿಂದ ಸ್ಥಳೀಯರು ಖಾಸಗಿ ವಾಹನದ ಮೂಲಕ ಇಬ್ಬರೂ ಗಾಯಾಳುಗಳನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಆದರೆ ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಬಾರದ ಕಾರಣ ಸ್ಥಳೀಯರು ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.










