ಹುಕ್ಕೇರಿ ಮತಕ್ಷೇತ್ರದಲ್ಲಿ ಆಪ್ ಭರ್ಜರಿ ಸಂಘಟನೆ
- 15 Jan 2024 , 3:18 AM
- Belagavi
- 194
ಹುಕ್ಕೇರಿ: ಹುಕ್ಕೇರಿ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಪ್ರಚಾರ ನಡೆಸಿ ಸಾರ್ವಜನಿಕರಿಗೆ ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ನೇತೃತ್ವದಲ್ಲಿ ಕರ ಪತ್ರ ಹಂಚಿ ಪಕ್ಷದ ಪ್ರಚಾರ ನಡೆಸಲಾಯಿತು.

ಹುಕ್ಕೇರಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಒಳ ಒಪ್ಪಂದ ರಾಜಕೀಯದಿಂದ ಜನ ಬೇಸತ್ತಿದ್ದಾರೆ. ಅಲ್ಲದೆ ಅಭಿವೃದ್ಧಿಯ ವಿಚಾರದಲ್ಲಿ ಹುಕ್ಕೇರಿ ಮತಕ್ಷೇತ್ರ ಹಿಂದುಳಿದಿದೆ. ಈ ಭಾಗದಲ್ಲಿ ಹೆಚ್ಚು ಕೈಗಾರಿಕೆ ಕಂಪನಿಗಳು ಬಂದು ಇಲ್ಲಿನ ಯುವಕರಿಗೆ ಉದ್ಯೋಗ,ಮಹಿಳೆಯರಿಗೆ ಭದ್ರತೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಕಾಂಗ್ರೆಸ್, ಬಿಜೆಪಿ ವಿಫಲವಾಗಿವೆ.

ಈ ಭಾಗದ ಜನರು ರೈತರು ಸಕ್ಕರೆ ಕಾರ್ಖಾನೆ ಕಬ್ಬು ಕಳುಹಿಸಿದರೆ ಸರಿಯಾಗಿ ಬಿಲ್ ಬರುವುದಿಲ್ಲ. ಕಾರ್ಮಿಕರಿಗೂ ಸರಿಯಾಗಿ ಸಂಬಳ ಆಗುತ್ತಿಲ್ಲ. ಇಲ್ಲಿನ ಜನರಿಗೆ ಕೆಇಬಿ ಮತ್ತು ನಗರ ಪಾಲಿಕೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಭಾಗದಲ್ಲಿ ಬದಲಾವಣೆಯನ್ನು ಜನರ ಬಯಸಿದ್ದಾರೆ. ಆದ್ದರಿಂದ ಆಮ್ ಆದ್ಮಿ ಪಕ್ಷ ಸಂಘಟನೆ ಮಾಡುತ್ತಿದೆ ಎಂದು ಆಪ್ ಕಾರ್ಯಕರ್ತರು ಕರ ಪತ್ರ ಹಂಚಿ ಆಪ್ ಪಕ್ಷದ ಪ್ರಚಾರ ನಡೆಸಿದರು.










