ಭರ್ಜರಿ ಪ್ರಚಾರ ನಡೆಸಿದ ಆಪ್ ಅಭ್ಯರ್ಥಿ ಟೋಪಣ್ಣವರ
- Krishna Shinde
- 15 Jan 2024 , 12:59 AM
- Belagavi
- 163
ಬೆಳಗಾವಿ :ಉತ್ತರ ಮತಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿಯಾಗಿರುವ ರಾಜಕುಮಾರ ಟೋಪಣ್ಣವರ ಸೋಮವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಯವಕರೊಂದಿಗೆ ಚುನಾವಣೆಯ ಚರ್ಚೆ ನಡೆಸಿ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿಕೊಂಡರು.

ಜಿಲ್ಲಾ ಕ್ರೀಡಾಂಗಣದಲ್ಲಿ ಯುವಕರೊಂದಿಗೆ ಚರ್ಚೆ ನಡೆಸಿದ ರಾಜಕುಮಾರ ಟೋಪಣ್ಣವರ ಯುವಕರ ಕಷ್ಟಗಳನ್ನು ಆಲಿಸಿದರು. ಆಮ್ ಆದ್ಮಿ ಪಕ್ಷಕ್ಕೆ ಒಂದು ಬಾರಿ ಅವಕಾಶ ನೀಡಿದರೆ ಸುಸಜ್ಜಿತವಾಗಿ ಕ್ರೀಡಾಂಗಣಗಳು, ಯುವಕರಿಗೆ ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ವೀರಭದ್ರ ನಗರದಲ್ಲಿಯೂ ಮತ ಭೇಟೆ ನಡೆಸಿದ ಟೋಪಣ್ಣವರ ಈಗಾಗಲೇ ಬೆಳಗಾವಿಯಲ್ಲಿ ಅಧಿಕಾರ ಅನುಭವಿಸಿದ ಬಿಜೆಪಿ, ಕಾಂಗ್ರೆಸ್ ನಿಂದ ಯಾವುದೇ ಹೇಳಿಕೊಳ್ಳುವಂಥ ಅಭಿವೃದ್ಧಿಯಾಗಿಲ್ಲ. ನನಗೆ ಒಂದು ಅವಕಾಶ ನೀಡಿದರೆ ನಿಮ್ಮ ಮನೆಯವನಾಗಿ ನಿಮ್ಮ ಬೇಕು ಬೇಡಿಕೆಯನ್ನು ಈಡೇರಿಸುವುದಾಗಿ ಟೋಪಣ್ಣವರ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಶಂಕರ ಹೆಗಡೆ, ಶಿವಾನಂದ ಕಾರಿ, ರವೀಂದ್ರ ಬೆಲ್ಲದ, ಜುನೈದ ಖಾನ್ ಸೇರಿದಂತೆ ನೂರಾರು ಆಪ್ ಕಾರ್ಯಕರ್ತರು ಉಪಸ್ಥಿತರಿದ್ದರು.










