ಮಹಿಳಾ ಕುಲಕ್ಕೆ ಅಪಮಾನ ಮಾಡಿದ ಮಾಜಿ ಶಾಸಕನ ಹೇಳಿಕೆ ಖಂಡಿಸಿದ ಆಪ್ ಮುಖಂಡ ದಶರಥ ಬನೋಶಿ

ಖಾನಾಪುರ: ಖಾನಾಪುರ ತಾಲೂಕಿನ ಬಿಜೆಪಿ ಕಚೇರಿಯಲ್ಲಿ ಕರ್ನಾಟಕ ಸರ್ಕಾರದ ಸಚಿವರಾದ ದಿವಂಗತ ಉಮೇಶ್ ಕತ್ತಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿ ಮಾಜಿ ಶಾಸಕ ಬಿಜೆಪಿ ಮುಖಂಡ ಅರವಿಂದ್ ಪಾಟೀಲ್ ಅವರು ಹೆಣ್ಣು ಮನೆಗೆ ಸೀಮಿತವಾಗಬೇಕು ಮನೆಯಲ್ಲಿ ರೊಟ್ಟಿ ಚಪಾತಿ ಮಾಡಿಕೊಳ್ಳುತ್ತಾ ಕೂರಬೇಕು ಎಂದು ಖಾನಾಪುರ ತಾಲೂಕು ಉಸ್ತುವಾರಿ ಬಿಜೆಪಿ ಮುಖಂಡೇ ಯಾದ ಸೋನಾಲಿ ಸರ್ನೋಬತ್ ಅವರಿಗೆ ನೇರವಾಗಿ ಸಭೆಯಲ್ಲಿಯೇ ಅವಮಾನಿಸಿ ಹೀಯಾಳಿಸಿದ ಘಟನೆ ಇಂದಿನ ಪತ್ರಿಕೆಗಳಲ್ಲಿ ಗಮನಕ್ಕೆ ಬಂದಿದೆ.

promotions

 

promotions

ಇದರ ಜೊತೆಯಾಗಿ ಬಿಜೆಪಿ ಪಕ್ಷದವರು ರಾಷ್ಟ್ರಪ್ರೇಮ ಹಿಂದೂ ಧರ್ಮದ ಪ್ರೇಮ ಹಿಂದುತ್ವ ಎಂದು ಅಬ್ಬರದ ಭಾಷಣ ಮಾಡುತ್ತಿರುವಾಗ ನಮ್ಮ ಭಾರತ ದೇಶದಲ್ಲಿ ಹೆಣ್ಣಿಗೆ ಯಾವ ರೀತಿ ಗೌರವ ಕೊಡಬೇಕು, ರಾಷ್ಟ್ರಧ್ವಜಕ್ಕೆ ಯಾವ ರೀತಿ ಗೌರವ ಕೊಡಬೇಕು, ಹಿಂದೂ ಧರ್ಮದ ಮಹಿಳೆಗೆ ಯಾವ ರೀತಿ ಗೌರವ ಕೊಡಬೇಕು ಎಂಬುದರ ಬಗ್ಗೆ ಸ್ವಲ್ಪವೂ ಪರಿಜ್ಞಾನ ಇಲ್ವಾ..??

ಒಂದು ವೇಳೆ ಪರಿಜ್ಞಾನ ಇದ್ದಿದ್ದರೆ ಮಾಜಿ ಶಾಸಕ ಅರವಿಂದ್ ಪಾಟೀಲ್ ಅವರು ಹೆಣ್ಣು ಕುಲಕ್ಕೆ ಅವಮಾನಿಸುತ್ತಿರಲಿಲ್ಲ. ಹೀಗಾಗಿ ಬಿಜೆಪಿ ಮುಖಂಡೇ ಸೋನಾಲಿ ಸರ್ನೋಬತ್ ಅವರಿಗೆ ನೇರವಾಗಿ ಅವಮಾನಿಸಿ ಇಡೀ ಹೆಣ್ಣು ಕುಲಕ್ಕೆ ಅವಮಾನ ಮಾಡಿದ್ದಾರೆ ಹೀಗಾಗಿ ಇವರ ಈ ಹೇಳಿಕೆಯನ್ನು ಖಾನಾಪುರ ತಾಲೂಕು ಆಮ್ ಆದ್ಮಿ ಪಕ್ಷದ ಮುಖಂಡ ದಶರಥ್ ಬನೊಶಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

Read More Articles