ಹುಕ್ಕೇರಿ ಶ್ರೀಗಳಿಗೆ ಕೃಷಿ ಉತ್ಸವದ ಆಮಂತ್ರಣ

ಬೆಳಗಾವಿ :

promotions

ಬೆಳಗಾವಿಯಲ್ಲಿ ನಡೆಯಲಿರುವ ಕೃಷಿ ಉತ್ಸವದಲ್ಲಿ ಗೋ ರಕ್ಷಣೆಯ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಲಹೆ‌ ನೀಡಿದರು.

promotions

ಶನಿವಾರ ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ಕೃಷಿ ಉತ್ಸವಕ್ಕೆ ಆಮಂತ್ರಣ ಸ್ವೀಕರಿಸಿ ಮಾತನಾಡಿದರು. ಬೆಳಗಾವಿಯಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆಯ ಸಹಯೋಗದಲ್ಲಿ ಮಾ.7 ರಿಂದ 11ರವರೆಗೆ ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್

ನವರು ಕೃಷಿ ಉತ್ಸವ ಆಯೋಜಿಸಿದ್ದಾರೆ. ಈ ಐದು ದಿನದಲ್ಲಿ ಮಾ.8 ರಂದು ಮಹಾ ಶಿವ ರಾತ್ರಿಯೂ ಇದೆ. ಅಂದು ಗೋ ಜಾಗರಣೆ ದಿನ ಎಂದು ಆಚರಿಸುವಂತೆ ಶ್ರೀಗಳು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ಅಧ್ಯಕ್ಷ ಮಂಜುನಾಥ ಅವಳಿ ಮಾತನಾಡಿ, ಹುಕ್ಕೇರಿ ಶ್ರೀಗಳ ಆಶೀರ್ವಾದ ರೋಟರಿ ಕ್ಲಬ್ ಮೇಲೆ ಇದೆ. ಕೃಷಿ ಉತ್ಸವದ ದಿನದಂದು ಗೋ ಜಾಗರಣೆ ದಿನವನ್ನು ಮಾಡಲಾಗುವುದು ಎಂದರು.

ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ಕಾರ್ಯದರ್ಶಿ ಅಭಯ ಜೋಶಿ, ಮಾಜಿ ಅಧ್ಯಕ್ಷ ರವಿ ಹತ್ತರಗಿ, ಅಭಿನಂದನ ದರಗಶೆಟ್ಟಿ ಉಪಸ್ಥಿತರಿದ್ದರು.

Read More Articles