ವಿಜಯ ಸಂಕಲ್ಪ ಅಭಿಯಾನದ ಯಶಸ್ವಿಗೆ ಎಲ್ಲರೂ ಕೈ ಜೋಡಿಸಿ: ಶಾಸಕ ಅನಿಲ ಬೆನಕೆ
- 14 Jan 2024 , 11:57 PM
- Belagavi
- 149
ಬೆಳಗಾವಿ: ಜ.21 ರಿಂದ 29 ವರೆಗೆ ಬಿಜೆಪಿ ಪಕ್ಷ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಇಂದು ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ತಮ್ಮ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಜನ ಸಂಕಲ್ಪ ಅಭಿಯಾನದ ಕುರಿತು ಜಾಗೃತಿ ಮೂಡಿಸಿದರು.

ಇಂದು ಶಾಸಕ ಅನಿಲ ಬೆನಕೆ ಅವರು, ಸಂಗಮೇಶ್ವರ ನಗರ, ಶಾಹು ನಗರ, ಮಾರ್ಖಂಡೆಯ ನಗರ, ಹನುಮಾನ ನಗರ, ಬಸವನ ಗಲ್ಲಿ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಮೇನ್ಸಿ ಗಲ್ಲಿ, ಭಾತ್ಕಾಂಡೆ ಗಲ್ಲಿ, ಮಠ ಗಲ್ಲಿ, ಕುಲಕರ್ಣಿ ಗಲ್ಲಿ, ಶ್ರೀ ಗಲ್ಲಿ, ಕೋನ್ವಾಲ್ ಗಲ್ಲಿ, ಮಾಹಾಂತೇಶ ನಗರ, ವಂಟಮೂರಿ ಕಾಲೋನಿ, ಚನ್ನಮ್ಮ ಸೊಸೈಟಿ ಶ್ರೀ ನಗರ, ರಾಮತಿರ್ಥ ನಗರ, ಅಲಾರವಾಡ ಹಾಗೂ ಬಸವನ ಕುಡಚಿಯಲ್ಲಿ ವಿಜಯ ಸಂಕಲ್ಪ ಅಭಿಯಾನದ ಕುರಿತು ಜಾಗೃತಿ ಮೂಡಿಸಿ, ಬಿಜೆಪಿ ಸದಸತ್ವ ಪಡೆಯಲು ಜನರಿಗೆ ಮನವಿ ಮಾಡಿಕೊಂಡರು.

ಲೋಕಲವಿವ ನ್ಯೂಸನಲ್ಲಿ ಜಾಹಿರಾತುಗಳಿಗಾಗಿ 8904752259 ಕರೆಮಾಡಿ
ಈ ವೇಳೆ ಮಾಹಿತಿ ನೀಡಿದ ಅವರು, ಬೆಳಗಾವಿ ಉತ್ತರ ಮತ ಕ್ಷೇತ್ರದಲ್ಲಿ ಇಂದು ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ಎಲ್ಲಾ ವಾರ್ಡುಗಳಿಗೆ ತೆರಳಿ ಅಲ್ಲಿಯ ನಗರ ಸೇವಕರು, ಶಕ್ತಿ ಕೇಂದ್ರ ಪ್ರಮುಖರು, ಮಹಾ ಶಕ್ತಿ ಕೇಂದ್ರ ಪ್ರಮುಖರು, ಭೂತ್ ಅದಕ್ಷ, ಸಮೀತಿ ಅದ್ಯಕ್ಷರು, ಎಲ್ಲರೂ ಸೇರಿ ಮನೆ ಮನೆಗೆ ತೆರಳಿ ವಿಜಯ ಸಂಕಲ್ಪ ಅಭಿಯಾನದ ಯಶಸ್ವಿಗೆ ಪ್ರಯತ್ನ ಮಾಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ ಎಸ್ ಯಡಿಯುರಪ್ಪ ಅವರು ಮಾಡಿರುವ ಅಭಿವೃದ್ಧಿ ಕೆಲಸವನ್ನು ಜನರಿಗೆ ತಲುಪಿಸುತ್ತಿದ್ದೇವೆ. ಜೊತೆಗೆ ನಾವು ಮಾಡಿರುವ ಅಭಿವೃದ್ಧಿ ಕೆಲಸವನ್ನು ಜನರಿಗೆ ತಲುಪಿಸುತ್ತಿದ್ದೇವೆ. ಮನೆ ಮನೆಗೆ ಕರ ಪತ್ರ ಹಂಚಿ ಸ್ಟಿಕರ್ ಅಂಟಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.










