ಮೊದಲಬಾರಿಗೆ ಬೆಳಗಾವಿಯಲ್ಲಿ ಉದ್ಘಾಟನೆಗೊಳ್ಳಲಿದೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ
- 15 Jan 2024 , 2:08 PM
- Belagavi
- 392
ಸೈನಿಕರ ಅಳಲು ತೋಡಿಕೊಳ್ಳಲು ಒಂದು ಸಂಘ
ಬೆಳಗಾವಿಯಲ್ಲಿ ಅತಿ ಹೆಚ್ಚು ಮಾಜಿ ಸೈನಿಕರು
ಬೆಳಗಾವಿಯಲ್ಲಿ ಮಾಜಿ ಸೈನಿಕ ಸಂಘದ ಉದ್ಘಾಟನೆ.
ಕುಮಾರ ಗಂಧರ್ವ ಹಾಲನಲ್ಲಿ ಉದ್ಘಾಟನೆ
ಬರುವ ಭಾನುವಾರ 4ನೇ ಡಿಸೆಂಬರ್ ಉದ್ಘಾಟನೆಗೆ ಸರ್ವರು ಭಾಗವಹಿಸಿ ಹಾರೈಸಲು ಕೋರಿದ ಮಾಜಿ ಸೈನಿಕರು.
ಸಚಿವ ಸತೀಶ್ ಜಾರಕಿ ಹೋಳಿ ,ಈರಣ್ಣಾ ಕಡಾಡಿ ,ಚನ್ನರಾಜ ಹಟ್ಟಿಹೊಳಿಯವರಿಂದ ಉದ್ಘಾಟನೆ.
ಬೆಳಗಾವಿ :ಮಾಜಿ ಸೈನಿಕರ ಸಮಸ್ಯೆಗಳನ್ನು ಅವಲೋಕಿಸಲು ಯಾವುದೇ ಸಂಘಟನೆಗಳಿಲ್ಲ, ಆದ್ದರಿಂದ ಅಖಿಲ್ ಕರ್ನಾಟಕ ಮಾಜಿ ಸೈನಿಕರ ಸಂಘಟನೆಯನ್ನು ಡಿಸೆಂಬರ್ 4 ರಂದು ನಗರದ ಕುಮಾರ ಗಂಧರ್ವ ಸಂಭಾಂಗಣದಲ್ಲಿ ಶಾಸಕರದ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಲಿದ್ದಾರೆ ಎಂದು ಮಾಜಿ ಸೈನಿಕರ ಸಂಘಟನೆಯ ಅಧ್ಯಕ್ಷರಾದ ಬಸಪ್ಪ ತರವಾರ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಸೈನಿಕರಿಗೆ ಜಮೀನು, ಸಾಮಾಜಿಕ ಅನ್ಯಾಯಗಳಾದ ಅವರ ಬೆಂಬಲಕ್ಕೆ ನಿಲ್ಲುವ ಉದ್ದೇಶದಿಂದ ಈ ಸಂಘಟನೆಯನ್ನು ಸ್ಥಾಪಿಸಲಾಗಿದೆ ಎಲ್ಲ ಮಾಜಿ ಸೈನಿಕರು ಈ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಬೇಕು ಎಂದು ಅವರು ತಿಳಿಸಿದರು.












