ಬೆಳಗಾವಿ ಜಿಲ್ಲೆ ಬರಪೀಡಿತ ಘೋಷಣೆಗೆ ಅಗ್ರಹಿಸಿ ರಾಜ್ಯ ರೈತ ಸಂಘ ಒಕ್ಕೂಟದಿಂದ ಉಪವಿಭಾಗಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ

ಬೈಲಹೊಂಗಲ- ಮನವಿ ಸಲ್ಲಿಸಿ ಮಾಜಿ ಶಾಸಕ ವಿಶ್ವನಾಥ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಹಾಗೂ ರೈತ ಮುಖಂಡ ಮಲ್ಲಿಕಾರ್ಜುನ ಹುಂಬಿ ಮಾತನಾಡಿ, ಬೆಳಗಾವಿ ಜಿಲ್ಲೆಯ ಅದ್ಯಂತ ರೈತರು ಬಿತ್ತನೆ ಮಾಡುವ ಸಮಯದಲ್ಲಿ ಮಳೆಗಾಲ ವಿಳಂಬವಾಗಿದ್ದು, ರೈತರು ಕಂಗಾಲಾಗಿದ್ದಾರೆ.

promotions

ಮತ್ತೊಂದೆಡೆ ಸಮರ್ಪಕ  ಮಳೆ ಆಗದಿರುವ ಹಿನ್ನೆಲೆಯಲ್ಲಿ ಬಿತ್ತನೆ ಮಾಡದೆ ಮುಂಗಾರು ಫಸಲಬಾರದೆ ಕಣ್ಣೀರಿಡುತ್ತಿದ್ದಾರೆ.

promotions

ಕೆಲ ರೈತರು ಕೆಲ ರೈತರು ಬ್ಯಾಂಕುಗಳಲ್ಲಿ ಸಾಲ ಪಡೆದು ಬೀಜ ಗೊಬ್ಬರ ತಂದು ಬಿತ್ತನೆ ಮಾಡಿದರು ಕೂಡ ಸರಿಯಾದ ಸಮಯಕ್ಕೆ ಮಳೆ ಬಾರದಿರುವ ಹಿನ್ನೆಲೆ ಕಮರಿ ಹೋಗಿದೆ.  ಅದಲ್ಲದೆ ಬ್ಯಾಂಕ್ ನವರು ಸಾಲ ಮರುಪಾವತಿ ಮಾಡಲು ರೈತರ ಮನೆಗಳಿಗೆ ನೋಟಿಸ್ ನೀಡುತ್ತಿದ್ದಾರೆ.

 ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ವಿದ್ಯುತ್ ಸಮಸ್ಯೆ ರೈತರನ್ನು ತುಂಬಾ ಕಾಡುತ್ತಿದ್ದು, ರೈತರ ಪಂಪ್ ಸೆಟ್ ಗಳಿಗೆ ತ್ರಿಫೇಸ್ ವಿದ್ಯುತ್ ನಿರಂತರ 10 ಗಂಟೆಗಳ ಕಾಲ ನೀಡಬೇಕು ಹಾಗೂ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.  

ಪ್ರಸ್ತುತ ರೈತರು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಇಂದು ಬೆಳಗಾವಿ ಯಲ್ಲಿ ಜಿಲ್ಲಾ ಉಸ್ತುವಾರಿಗಳ ನೇತೃತ್ವದಲ್ಲಿ ಕೆಡಿಪಿ ಸಭೆ ಕರೆಯಲಾಗಿದೆ.
ಸಭೆಯಲ್ಲಿಯೇ ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಿಸುವಂತೆ ಅಗ್ರಹಿಸಿ,ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಉಪ ವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.

Read More Articles