ಗೋಕಾಕ ಮೂಲದ ಇಂಜಿನಿಯರ್ ಆತ್ಮಹತ್ಯೆಗೆ ಶರಣು ತಡವಾಗಿ ಬೆಳಕಿಗೆ ಬಂದ ಘಟನೆ

ದಾವಣಗೆರೆ :  ಗೋಕಾಕ್ ಮೂಲದ ಮೆಕ್ಯಾನಿಕಲ್ ಇಂಜಿನಿಯರ್ನೋರ್ವ ನಗರದ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

promotions

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕು ಕಳ್ಳಿಗುಡ್ಡೆ ಗ್ರಾಮದ ಸಂತೋಷ್ ಲಕ್ಷ್ಮಣ್ ಹಿರೆಡ್ಡಿ(32 ವರ್ಷ) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. . ಈತ ಕಳೆದ ಆ.6ರಂದು ರಾತ್ರಿ ನಗರದ ದರ್ಶನ್ ಲಾಡ್ಜ್ ನಲ್ಲಿ ರೂಮ್ ಬಾಡಿಗೆ ಪಡೆದು ಉಳಿದುಕೊಂಡಿದ್ದರು. ಬೆಡ್ ಶೀಟ್ ನಿಂದ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದು, ಬೆಡ್ ಶೀಟ್ ಜಾರಿ ಕೆಳಗಡೆ ಬಿದ್ದು ತಲೆಗೆ ಪೆಟ್ಟಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಾಲ್ಕು ದಿನಗಳು ಕಳೆದ ಮೇಲೆ ವಿಷಯ ಲಾಡ್ಜ್ ನವರ ಗಮನಕ್ಕೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

promotions

Read More Articles