ಅಂತರಾಜ್ಯ ಔಷಧ ಸರಬರಾಜು ವಾಹನಕ್ಕೆ ಬೆಂಕಿ ವಾಹನ ಸುಟ್ಟು ಕರಕಲು

ಚಿಕ್ಕೋಡಿ :  ಆಕಸ್ಮಿಕವಾಗಿ ತಗುಲಿದ ಬೆಂಕಿ, ವಾಹನದಲ್ಲಿದ್ದ  ಸಿಲಿಂಡರ್ ಟಾಕಿಗಳು ಸ್ಫೋಟಗೊಂಡು ಅಂತರ ರಾಜ್ಯ ಆಯುರ್ವೇದಿಕ್ ಔಷಧ ಮಾರಾಟಗಾರರ ವ್ಯಾನ್ ಒಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಚಿಕ್ಕೋಡಿ ಬಳಿ ನಡೆದಿದೆ. 

promotions

ಸಿಲಿಂಡರ್ ಸ್ಪೋಟದ ರಭಸಕ್ಕೆ ವಾಹನದಲ್ಲಿದ್ದ ಔಷಧಿ ಹಾಗೂ ಇತರೇ ವಸ್ತುಗಳು ಕೂಡಾ ಸುಟ್ಟು ಭಸ್ಮವಾಗಿವೆ. 

promotions

ತಗುಲಿದ ಬೆಂಕಿಯನ್ನು ನಂದಿಸಲು ಚಿಕ್ಕೋಡಿ ಅಗ್ನಿಶಾಮಕ ದಳದವರು ಸ್ಥಳಕ್ಕಡ ಧಾವಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಘಟನೆಗೆ ಕಾರಣ ಇನ್ನು ತಿಳಿದು ಬಂದಿಲ್ಲ.  ಪೊಲೀಸರ ತನಿಖೆಯ ಮೇಲೆಯೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ವರದಿ : ರಾಹುಲ್  ಮಾದರ 

Read More Articles