ಕೆಎಲ್ಇಯ ಮತ್ತೊಂದು ಮೈಲುಗಲ್ಲು
- 15 Jan 2024 , 1:01 AM
- Belagavi
- 112
ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಬಿ ಎಂ ಕಂಕಣವಾಡಿ ಆಯುರ್ವೇದ ಫರ‍್ಮಾದಲ್ಲಿ ಕಳೆದ 87 ವರ್ಷದಿಂದ ಆಯುರ್ವೇದ ಔಷಧಿ ಹಾಗೂ ಸಾಂಪ್ರದಾಯಿಕ ಆಯುರ್ವೇದ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಒಳ್ಳೆಯ ಗುಣಮಟ್ಟದ ಆಯುರ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಕ್ರಮಕೈಕೊಂಡಿದ್ದು, ದೇಶಾದ್ಯಂತ ಕೆಎಲ್‌ಇ ಆಯುರ ಔಷಧಾಲಯಗಳನ್ನು ತೆರೆಯಲಾಗುತ್ತದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಆವರಣದಲ್ಲಿ ಕೆಎಲ್‌ಇ ಆಯುರ ಔಷಧಾಲಯ (ಆಯುರ್ವೇದಿಕ ಫರ‍್ಮಾಸಿ)ವನ್ನು ಜನಸೇವೆಗೆ ಅರ್ಪಿಸಿ ಮಾತನಾಡಿದ ಅವರು, ಅಲೋಪಥಿಗೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡಿ ಭಾರತೀಯ ಸಾಂಪ್ರಾದಾಯಿಕ ಔಷಧಿ ಪದ್ದತಿಯನ್ನು ನಾಶಪಡಿಸಿದ್ದೇವೆ.

ಅದನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಅದಕ್ಕಾಗಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಯುಷ್ಯ ಮಂತ್ರಾಲಯಕ್ಕೆ ಅತೀ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿದ್ದಾರೆ. ಅಲೋಪಥಿಗೆ ರ‍್ಯಾಯವಾಗಿ ಹೊಮಿಯೋಪಥಿ ಬೆಳೆದಿದೆ. ಆದರೆ ಆಯುರ್ವೇದ ಹಿಂದೆ ಬಿದ್ದಿದೆ. ಆದ್ದರಿಂದ ಆಯುರ್ವೇದಕ್ಕೆ ಹೆಚ್ಚಿನ ಪ್ರಾಶಸ್ತö್ಯ ನೀಡುವದಕ್ಕಾಗಿ ದೇಶದ್ಯಾಂತ ಕೆಎಲ್ಇ ಆಯುರ ಔಷಧಾಲಯವನ್ನು ತೆರೆಯಲಾಗುತ್ತಿದೆ ಎಂದು ಹೇಳಿದರು.
1938ರಲ್ಲಿ ಪ್ರಾರಂಭಿಸಲಾದ ಆಯುರ್ವೇದ ಫರ‍್ಮಾಸಿಗಾಗಿ ಅವಶ್ಯವಿರುವ ಗಿಡಮೂಲಿಕೆಗಳನ್ನು ಬಂಬರಗಾ ಗ್ರಾಮದ ಸುಮಾರು 16 ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಅದೇ ಪ್ರದೇಶದಲ್ಲಿ ಬೃಹತ್ತಾದ ಆಯುರ ಫರ‍್ಮಾ ಹಾಗೂ ಸಂಶೋಧನಾ ಕೇಂದ್ರ ತಲೆ ಎತ್ತಲಿದೆ. ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ಆಯುವೇದಿಕ ಗಿಡಮೂಲಿಕೆಗಳಿದ್ದು, ಅವುಗಳ ಸಂಶೋಧನೆಗಾಗಿ ಕೆಎಲ್‌ಇ ಸಂಸ್ಥೆಯ ಬಿ ಎಂ ಕಂಕಣವಾಡಿ ಆಯುರ್ವೇದಿಕ ಮಹಾವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿದ್ದು, ಅದರೊಂದಿಗೆ ಜೊತೆಗೂಡಿ ಆಯುರ್ವೇದ ಅಭಿವೃದ್ದಿ ಹಾಗೂ ಜನರಿಗೆ ತಲುಪಿಸುವ ಕರ‍್ಯ ಮಾಡಲಾಗುತ್ತದೆ ಎಂದ ಅವರು, ನಮ್ಮ ಪಾರಂಪರಿಕ ಔಷಧಿ ಪದ್ದತಿಗೂ ಕೂಡ ಮಹತ್ವ ನೀಡಬೇಕು ಎಂದು ಕರೆ ನೀಡಿದರು.
ಬಿ ಎಂ ಕಂಕಣವಾಡಿ ಆಯುರ್ವೇದಿಕ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಸುಹಾಸಕುಮಾರ ಶೆಟ್ಟಿ ಅವರು ಮಾತನಾಡಿ, ಕೆಎಲಇ ಆಯುರ ಫರ‍್ಮದಲ್ಲಿ 326 ತರಹದ ಔಷಧಗಳನ್ನು ತಯಾರಿಸುತ್ತಿದ್ದು, ಅದರಲ್ಲಿ 26 ಸಾಂಪ್ರದಾಯಿಕವಾದ ರೋಗತಡೆಗಟ್ಟುವ ಆಯುರ್ವೇದ ಪದ್ದತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
ಉತ್ಪನ್ನಗಳನ್ನು ಮಾರಾಟ ಮಾಡುವ ಮೊದಲು ಆಯುಷ್ಯ ಪ್ರಮಾಣೀಕೃತ ಪ್ರಯೋಗಾಲಯದಲ್ಲಿ ಪರೀಕ್ಷೆಗೋಲ್ಪಡಿಸಲಾಗುತ್ತದೆ. ಉತ್ತಮ ಗುಣಮಟ್ಟ ಮತ್ತು ಪರಿಣಾಮಕಾರಿಯನ್ನು ಖಾತ್ರಿಪಡಿಸಿ ಅದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತದೆ. ಹರ್ಬಲ್ ಚಹಾ( ಟೀ) ಚವನಪ್ರಾಶ, ಸುವರ್ಣಬಿಂದು ಪ್ರಾಶಣ, ಕಾಸ್ಟಧೂಪ, ಹಲ್ಲಿನ ಪುಡಿ, ಬೃಂಗರಾಜ ಎಣ್ಣೆ, ದುಗ್ದರ‍್ಧಿನಿ ಸೇರಿದಂತೆ ಅನೇಕ ಆಯುರ್ವೇದ ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಹೆಚ್ ಬಿ ರಾಜಶೇಖರ, ಡಾ. ವಿ ಡಿ ಪಾಟೀಲ, ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ಆರಿಫ್ ಮಾಲ್ದಾರ, ಡಾ. ಸುನೀಲ ಜಲಾಲಪುರೆ, ಡಾ. ಪಿ ಜಿ ಜಾಡರ, ಡಾ. ಸವಿತಾ ಭೊಸಲೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.










