ಕಬ್ಬಿಗೆ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಪ್ ಒತ್ತಾಯ

ಬೆಳಗಾವಿ :ಕಬ್ಬು ಬೆಳಗಾರರ ರೈತರಿಗೆ  ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಸೋಮವಾರ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ‌ ನಡೆಸಿ‌ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು.

promotions

ಕಬ್ಬು ಸಾಗಾಟ ವೆಚ್ಚವು 1 ಕೀಮಿ ಕೈ ಮತ್ತು 100 ಕೀಮಿ ಇರುವ ವೆಚ್ಚ ಒಂದೆ ಇರುತ್ತದೆ. ಇದು ಅವೈಜ್ಞಾನಿಕವಾಗಿದ್ದು, ಕೀಮಿ ಅಂತರದ ಮೇಲೆ ಸಾಗಾಟ ವೆಚ್ಚ ಮುರಿದು ಸಮೀಪ ಇರುವ ರೈತರಿಗೆ ಹೆಚ್ಚಿನ ಬೆಲೆ ಸಿಗುವಂತಾಗಬೇಕು. ಆಮ್ ಆದ್ಮ ಪಕ್ಷದ ಆಡಳಿತ ಇರುವ ಪಂಜಾಬ್ ರಾಜ್ಯದಲ್ಲಿ ನಮಗಿಂತ ಕಬ್ಬಿನ ರಿಕವರಿ ಕಡಿಮೆ ಇದ್ದರು ಕೂಡಾ 3,800 ರೂಪಾಯಿ ಪ್ರತಿ ಮೆಟ್ರಿಕ್‌ ಟನ್ ಗೆ ದರ ನಿಗದಿಯಿದ್ದು, ಕರ್ನಾಟಕ ರೈತ ಸಂಘದವರು ಬೇಡಿಕೆ ಇಟ್ಟಿರುವ ಕನಿಷ್ಠ 3500 ರೂ ದರ ನ್ಯಾಯಯುತವಾಗಿದ್ದು ಕೂಡಲೇ ಮಂಜೂರು ಮಾಡಲು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ‌.

promotions

ಒಂದು ಕಬ್ಬಿಗೆ ಉಪ ಉತ್ಪನ್ನಗಳಾದ ಎಥನಾಲ್,  ಆಲ್ಕೋಹಾಲ್ ಹಾಗೂ ವಿದ್ಯುತ್ ತಯಾರಿಕೆಯಿಂದ ಸಕ್ಕರೆ ಕಾರ್ಖಾನೆಗೆ ಅಪಾರವಾದ ಆದಾಯ ಬರುವುದಲ್ಲದೆ, ಸರಕಾರಕ್ಕೆ 4,500 ರೂ. ತೆರಿಗೆ ಸಂಗ್ರಹವಾಗುತ್ತಿದ್ದು, ಅದರಲ್ಲಿ ಸರಕಾರ ಪ್ರತಿ ಟನ್ ಗೆ 2,000 ರೂ. ಮರಳಿ ನೀಡುವ ವ್ಯವಸ್ಥೆಯಾಗಬೇಕು ಮನವಿಯಲ್ಲಿ ತಿಳಿಸಿದ್ದಾರೆ.

ಕಬ್ಬು ಕಳಿಸಿದ ರೈತರಿಗೆ  ಕಟಾವು ಮುಗಿದು 15 ದಿನಗಳ ಒಳಗೆ ಬಿಲ್ ನೀಡಲು ಆದೇಶವಿದ್ದರೂ ಜಾರಿಯಾಗುತ್ತಿಲ್ಲ. ಅದು ತತಕ್ಷಣ ಜಾರಿಯಾಗಬೇಕು ಆಗ್ರಹಿಸಿದರು.

ರೈತರ ಹಿತ ದೃಷ್ಟಿ ಕಾಪಾಡಬೇಕಿದ್ದ ಸರಕಾರ ಮತ್ತು ಸಕ್ಕರೆ ಸಚಿವಾಲಯ ಸಕ್ಕರೆ ಕಾರ್ಖಾನೆಯ ಹಿತ ಕಾಯುತ್ತಿರುವುದು ಸರಿಯಲ್ಲ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು  ಮೇಲ್ಕಂಡ ಅಂಶಗಳನ್ನು  ಪರಿಶೀಲಿಸಿ ರೈತರಿಗೆ ವೈಜ್ಞಾನಿಕ ಬೆಲೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು‌.

ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ಶಂಕರ ಹೆಗಡೆ, ತವಾಬ್ ಶೇಖ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles