ಸಾರಿಗೆ ನೌಕರರ ಸೈಕಲ್ ರ್ಯಾಲಿ ಮೂಲಕ ಮನವಿ ಅರ್ಪಣೆ

ಬೆಳಗಾವಿ: ಸಾರಿಗೆ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಸ್ತೆ ಸಾರಿಗೆ ನೌಕರರು ಕೇಂದ್ರ ಬಸ್ ನಿಲ್ದಾಣದಿಂದ ಸೈಕಲ್ ರ್ಯಾಲಿ ನಡೆಸಿ‌ ಜಿಲ್ಲಾಧಿಕಾರಿಗಳಿಗೆ‌ ಮನವಿಯೊಂದನ್ನು ಅರ್ಪಿಸಿದರು.

promotions

ಕರ್ನಾಟಕ ಸರಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳ ನೌಕರರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವಲ್ಲಿ ವಿಫಲವಾಗಿದೆ.

promotions

ಸಾರಿಗೆ ನೌಕರರಿಗೆ ಸಮಾನ ವೇತನ, ಆಯೋಗ ಮಾದರಿಯಲ್ಲಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ಸಾರಿಗೆ ಮುಷ್ಕರ ಸಮಯದಲ್ಲಿ ಮಾಡಿರುವ ವಜಾ ಪ್ರಕರಣವನ್ನು ಯಾವುದೇ ನಿಬಂಧನೆಗಳನ್ನು ವಿಧಿಸದೆ ಕೂಡಲೇ ಪುನರ್ ನೇಮಕ ಮಾಡಿಕೊಳ್ಳಬೇಕು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ವಿಭಾಗದ ನೌಕರರಿಗೆ ಚಾಲ್ತಿಯಲ್ಲಿರುವ ವೇತನದ ಆಯೋಗದ ಮಾದರಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

Read More Articles