ಅವರಗೋಳ ದಿಂದ ಶ್ರೀಕ್ಷೇತ್ರ ಪಂಢರಪುರ ವರೆಗೆ ಆಷಾಢ ದಿಂಡಿ ಪಾದಯಾತ್ರೆ

ಬೆಳಗಾವಿ :  ಜುಲೈ1 ಜ್ಯೇಷ್ಠ ವಧ್ಯ ದಶಮಿದಂದು ಶ್ರೀ ಸಂತ ಶಿರೋಮಣಿ ಭೀಮಾಪ್ಪಾ ಅಜ್ಜಾ ಅವರಗೋಳ ಅವರ ಸುಕ್ಷೇತ್ರ ಅವರಗೊಳದ ಅವರ ಮನೆಯಿಂದ ಶ್ರೀಕ್ಷೇತ್ರ ಪಂಢರಪುರದ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನ ವರೆಗೆ ಪಲ್ಲಕ್ಕಿ ಉತ್ಸವ, ಪ್ರಸ್ಥಾನ ನಡಯುವದು. ಜ್ಯೇಷ್ಠ ವದ್ಯ ಏಕಾದಶಿ ಜುಲೈ 02 ರಂದು ಸುಕ್ಷೇತ್ರ ಅವರಗೊಳ ದಿಂದ ಶ್ರೀಕ್ಷೇತ್ರ ಪಂಢರಪುರಕೆ ಮುಂಜಾನೆ 6ಕ್ಕೆ ಹೊರಡುವದು. ಈ ವಿಶೇಷ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರು ತುಳಸಿ ಮಾಲೆ ಧರಿಸಿ, ''ತ್ಯಾಗ, ದಯೆ, ಸೌಹಾರ್ದ, ಅಹಿಂಸೆ, ಪ್ರೀತಿ, ಮಾನವೀಯತೆ, ಕ್ಷಮಾ ಗುಣಗಳೊಂದಿಗೆ ಸರಳ ಜೀವನ ನಡೆಸುತ್ತಾರೆ. 

promotions

ಆಶಾಡ ವಾರಿ ಏಕಾದಶಿ ಉಪವಾಸ ಕೈಗೊಂಡು ಪಾಂಡುರಂಗನ ಕೃಪೆಗೆ ಪಾತ್ರರಾಗುತ್ತಾರೆ. ಭಜನೆ, ಕೀರ್ತನೆಗಳನ್ನು ಮಾಡುತ್ತಾ ಕಾಲ ಕಳೆದಂತೆ ಅಂತರಂಗದಲ್ಲಿ ಭಗವಂತನನ್ನು ಮನದಲ್ಲಿ ಸ್ಮರಿಸಬೇಕು. ' ಪಾದಯಾತ್ರೆಗೆ ಬರುವ ಭಕ್ತಾದಿಗಳು 01/07/2024 ರಂದು ಮದ್ಯಾಹ್ನ 02:00 ಗಂಟೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕ ಅವರಗೋಳ ಗ್ರಾಮಕ್ಕೆ ಸಮಸ್ಥ ಸದ್ಭಕ್ತರು ಆಗಮಿಸಿ ಪಾಂಡುರಂಗನ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

promotions

Read More Articles