ಜ್ಞಾನೇಶ್ವರಿ ಪಾರಾಯಣದ ವಿಶೇಷ ಭವನ ನಿರ್ಮಾಣಕ್ಕೆ ನೆರವು: ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಗೆ ವಿಶಿಷ್ಟ ರೀತಿಯಲ್ಲಿ ಧನ್ಯವಾದ ಸಮರ್ಪಣೆ

ಬೆಳಗಾವಿ :ಗ್ರಾಮೀಣ ಮತಕ್ಷೇತ್ರದ ಉಚಗಾಂವ ಗ್ರಾಮದ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣದ ವಿಶೇಷ ಭವನವನ್ನು ನಿರ್ಮಿಸುವ ದೃಷ್ಟಿಯಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ 25 ಲಕ್ಷ ರೂ, ನೀಡಿದ್ದಾರೆ.

promotions

ಈ ಹಿನ್ನೆಲೆಯಲ್ಲಿ ವಾರ್ಕರಿ ಸಂತ ಮಹಾರಾಜರು ಶ್ರಾವಣ ಸೋಮವಾರದ ಪ್ರಯುಕ್ತ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಗೃಹ ಕಚೇರಿಯಲ್ಲಿ ಶ್ರೀ ವಿಠ್ಠಲ ರುಕ್ಮಾಯಿಯ ಸ್ಮರಣೆಯಲ್ಲಿ ಭಜನೆ ಹಾಗೂ ಕುಣಿತದ ಮೂಲಕ ವಿನೂತನ ರೀತಿಯಲ್ಲಿ ಧನ್ಯವಾದಗಳನ್ನು ಸಮರ್ಪಿಸಿದರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ತಮ್ಮ ತಾಯಿಗೆ ಆಗಷ್ಟ್ ತಿಂಗಳಲ್ಲಿ ಪಂಡರಿನಾಥನ ಸನ್ನಿಧಾನಕ್ಕೆ ತೆರಳಿ ದರ್ಶನ ಆಶೀರ್ವಾದ ಪಡೆಯೋಣ ಎಂದಿದ್ದರಂತೆ.
 

promotions

ಕಾಕತಾಳೀಯ ಎನ್ನುವಂತೆ ಇವತ್ತು ಆ ಪಂಡರಿನಾಥನೇ ವಾರ್ಕರಿ ಸಂತರ ಮೂಲಕ ಮನೆಗೆ ಆಗಮಿಸಿದ್ದಾನೆ. ಇದು ನಮ್ಮೆಲ್ಲರ ಸೌಭಾಗ್ಯವಾಗಿ ಪರಿಣಮಿಸಿದೆ ಎಂದು ಹೆಬ್ಬಾಳಕರ್ ಈ ವೇಳೆ ತಿಳಿಸಿದರು. ನಂತರ ಉಚಗಾಂವ ವಾರ್ಕರಿ ಮಂಡಳದ ವತಿಯಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಲಕ್ಷ್ಮೀ ಹೆಬ್ಬಾಳಕರ ಅವರ ತಾಯಿ ಗಿರಿಜಾ ಹಟ್ಟಿಹೊಳಿ, ಪುತ್ರ ಮೃಣಾಲ್ ಹೆಬ್ಬಾಳಕರ್ ಹಾಗೂ ಸೊಸೆ ಹಿತಾ ಮೃಣಾಲ ಹೆಬ್ಬಾಳಕರ್ ಅವರನ್ನು ಆತ್ಮೀಯವಾಗಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಉಚಗಾಂವ ಗ್ರಾಮದ ಹಿರಿಯರು, ಪಾರಾಯಣ ಮಂಡಳದ ಸಂತ ಮಹಾರಾಜರು, ವಿಠ್ಠಲ ರುಕ್ಮಾಯಿಯ ಭಕ್ತಾಧಿಗಳು ಉಪಸ್ಥಿತರಿದ್ದರು.

Read More Articles