ಮಕ್ಕಳ ಕಳ್ಳರ ಮೇಲೆ ಫೈರಿಂಗ್ ಮಾಡಿದ ಅಥಣಿ ಪೊಲೀಸ್ರು
ಚಿಕ್ಕೋಡಿ: ಮಕಳ್ಳ ಕಳ್ಳರ ಮೇಲೆ ಅಥಣಿ ಪೋಲಿಸರಿಂದ ಫೈರಿಂಗ್ ಮಾಡಿ ಇಬ್ಬರೂ ಬಾಲಕರನ್ನು ಸುರಕ್ಷಿತವಾಗಿ ರಕ್ಷಿಸಿದ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಾರಾಷ್ಟ್ರ ಗಡಿಯಲ್ಲಿ ಮಕ್ಕಳ ಕಳ್ಳರನ್ನು ತಡೆಗಟ್ಟಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಆರಕ್ಷಕರು ತಮ್ಮ ಆತ್ಮರಕ್ಷಣೆಗಾಗಿ ಓರ್ವ ಆರೋಪಿನ ಎಡಗಾಲಿಗೆ ಗುಂಡೆಟು ಹೊಡೆದು ಮೂರು ಜನ ಆರೋಪಿಗಳನ್ನು ವಶಪಡಿಸಿಕೊಂಡು ಗಾಯಾಳುವನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ನಿನ್ನೆ ಗುರುವಾರ ದಿನದಂದು ಅಥಣಿ ಪಟ್ಟಣದ ಹುಲಗಬಾಳ ರಸ್ತೆಯ ಸ್ವಾಮಿ ಪ್ಲಾಟದ ಬಡಾವಣೆಯ ವಿಜಯ್ ದೇಸಾಯಿ ಎಂಬುವರ ಮನೆಗೆ ಹೊಕ್ಕು ಅವರ ಇಬ್ಬರು ಮಕ್ಕಳಾದ
ಸ್ವಸ್ತಿ ವಿಜಯ್ ದೇಸಾಯಿ (೪) ಮತ್ತು ವಿಯೋಮ್ ವಿಜಯ ದೇಸಾಯಿ (೩) ಮಕ್ಕಳನ್ನು ಅಪಹರಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದರು, ಕೂಡಲೆ ಕಾರ್ಯಪ್ರವೃತ್ತರಾದ ಅಥಣಿ ಪೊಲೀಸ್ರು ಮೂರು ತಂಡಗಳನ್ನು ಮಾಡಿಕೊಂಡು ಹುಡುಕಾಟ ನಡೆಸಿದರು, ಮಹಾರಾಷ್ಟ್ರ ಗಡಿಯಾದ ಕೋಹಳ್ಳಿ ಸಿಂಧೂರ್ ಮಾರ್ಗ ಮಧ್ಯದಲ್ಲಿ ಮಕ್ಕಳ ಕಳ್ಳರನ್ನು ಪೊಲೀಸರು ತಡೆಗಟ್ಟಿದಾಗ ದುಷ್ಕರ್ಮಿಗಳು ಪೊಲೀಸರ ಮೇಲೆ ಅಲ್ಲೆಗೆ ಮುಂದಾಗುತ್ತಿದ್ದಂತೆ ಪೊಲೀಸರು ಕೊಲ್ಲಾಪುರ ಜಿಲ್ಲೆ ಹಾತ್ ಕನಗಲಾ ಗ್ರಾಮದ ಆರೋಪಿಯಾದ ಸಂಬಾಜಿ ರಾವಸಾಬ ಕಾಂಬಳೆ ಎಂಬುವರ ಎಡಗಾಲಿಗೆ ಗುಂಡೆಟ್ಟು ಹೊಡೆದು ಬಂಧಿಸಲಾಗಿದೆ ಅವನನ್ನು ಸ್ಥಳೀಯ ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬೆಳಗಾವಿ ಎಸ್ ಪಿ ಭೀಮಶಂಕರ್ ಗುಳೆದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಜಮೀರ್ ಡಾಂಗೆ ಹಾಗೂ ರಮೇಶ್ ಹಾದಿಮನಿ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲ ಮಾಡಿ ಅವರಿಗೂ ಕೂಡ ಚಿಕಿತ್ಸೆ ಮುಂದುವರೆದಿದೆ, ಇಬ್ಬರು ಮಕ್ಕಳು ಸುರಕ್ಷಿತವಾಗಿ ತಾಯಿ ಮಡಿಲು ಸೇರಿದ್ದು ಅಥಣಿ ಪೊಲೀಸರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ವರದಿ : ರಾಹುಲ್ ಮಾದರ










