ಎ ಟಿ ಎಂ ನಿಂದ ಹಣ ದೋಚಿದವನ ಬಂಧನ: ಎಸ್ಪಿ
- 15 Jan 2024 , 12:01 AM
- Belagavi
- 129
ಬೆಳಗಾವಿ: ಎಟಿಎಂಗೆ ಹೋದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಪಾಸ್ ವಡ್೯ ತಿಳಿದು 37,500 ರೂ. ಹಣ ದೋಚಿದ್ದವ ಬಂಧನ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹೇಳಿದರು.

ಚಿಕ್ಕೋಡಿ ತಾಲೂಕಿನ ಹಾಲಟ್ಟಿ ಗ್ರಾಮದ ವಿಜಯಾ ರಾನಪ್ಪ ಎಂಬ ಮಹಿಳೆ ಅ.3 ರಂದು ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ಹೋದಾಗ, ಯಾವುದೋ ಒಬ್ಬ ವ್ಯಕ್ತಿ ಸಹಾಯ ಮಾಡುವ ನೆಪದಲ್ಲಿ ವಾಸ ವರ್ಡ ತಿಳಿದುಕೊಂಡು ಕಾರ್ಡ ಎಕ್ಸ್‌ಟೆಂಟ್ ಮಾಡಿ ಇವರ ಅಕೌಂಟ್‌ದಿಂದ 37.500 ರೂ. ಹಣ ವಿತ್ ಡ್ರಾ ಮಾಡಿಕೊಂಡ ಬಗ್ಗೆ ದೂರು ನೀಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕಣದ ದಾಖಲ ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಆರೋಪಿತನಾದ ಅಮುಲ ದಿನ ಸಖಟೆ (30) ಬಂಧಿಸಿ ಈತನಿಂದ ಬೇರೆ ಬೇರೆ ಜನರಿಗೆ ಮೋಸ ಮಾಡಿದ ವಿವಿಧ ಬ್ಯಾಂಕಗಳ ಒಟ್ಟು 51 ಎಟಿಎಮ್ ಕಾರ್ಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತನು ಅಥಣಿ, ಗೋಕಾಕ, ನಿಪ್ಪಾಣಿ, ಚಿಕ್ಕೋಡಿ, ಬಾಗಲಕೋಟ ಹಾಗೂ ಮಹಾರಾಷ್ಟ್ರ ರಾಜ್ಯದ ಹಲವು ಕಡೆಗಳಲ್ಲಿ ಇದೇ ರೀತಿ ಅಪರಾಧ ಎಸಗಿದ ಬಗ್ಗೆ ಕಂಡು ಬಂದಿದ್ದು ತನಿಖೆ ಮುಂದುವರೆದಿದೆ ಎಂದರು.










