ಅತಿ ವಿಜ್ರಮಣೆಯಿಂದ ಜರುಗಿದ ಅಯ್ಯಪ್ಪ ಸ್ವಾಮಿ ಅಗ್ನಿ ಪೂಜೆ
- shivaraj bandigi
- 15 Jan 2024 , 3:09 AM
- Belagavi
- 570
ಅಥಣಿ : ಶಬರಿಮಲೆ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಅಯ್ಯಪ್ಪ ಸ್ವಾಮಿ ಮತ್ತು ಮಾಲೆ ಧರಿಸುವ ಭಕ್ತರು. ಅಯ್ಯಪ್ಪ ಸ್ವಾಮಿಯ ಸಾನಿಧ್ಯವಾದ ಶಬರಿಮಲೆಯನ್ನು ಜಾತ್ಯಾತೀತೆಯ ನೆಲೆಬೀಡೆಂದರೆ ತಪ್ಪಾಗಲಾರದು. ಯಾಕೆಂದರೆ ಮಾಲೆ ಧರಿಸಿದ ಯಾವುದೇ ಜಾತಿಯ ಭಕ್ತನಾದರೂ ಕೂಡ ಶಬರಿಮಲೆಯಲ್ಲಿ ಒಂದಾಗುತ್ತಾರೆ. ಇಲ್ಲಿ ಭಕ್ತರ ಭಕ್ತಯೇ ಪ್ರಧಾನವಾಗಿರುತ್ತದೆ. ಮಾಲೆ ಧರಿಸಿದ ಪ್ರತಿಯೊಂದು ಅಯ್ಯಪ್ಪನ ಭಕ್ತರು ಒಂದು ಕುಟುಂಬದಂತೆ ಮಕರ ಸಂಕ್ರಾಂತಿಯಂದು ಶಬರಿ ಮಲೆಯಲ್ಲಿ ಬಂದು ಸೇರುತ್ತಾರೆ ಅಯ್ಯಪ್ಪ ಸ್ವಾಮಿಯವರ ಆರಾಧನೆಯಲ್ಲಿ ಸತತವಾಗಿ ಮೂರು ದಶಕಗಳಿಂದ ತೊಡಗಿರುವ ಹಲ್ಯಾಳ ಗ್ರಾಮದ ಯುವಕರ ಭಕ್ತಿ ಪರಾಕಷ್ಟೇ ಮೆಚ್ಚುವಂತದ್ದು.

ಹೌದು ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಸತತ ಮೂರು ದಿನಗಳ ಕಾಲ ಉತ್ಸವದ ಜೊತೆಗೆ ಇಂದು ಅಗ್ನಿಹೋತ್ರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬೆಳಗ್ಗೆ ಮಡಿವಂತಿಕೆಯಿಂದ ಎದ್ದು ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮುಗಿಸಿಕೊಂಡು ದೇವರ ಆರಾಧನೆಯಲ್ಲಿ ತೊಡಗಿರೋ ಯುವಕರು ಅಯ್ಯಪ್ಪನ ಆರಾಧನೆಯಲ್ಲಿ ಉತ್ಸವ ಕಾರ್ಯಕ್ರಮವನ್ನು ಮಾಡುವುದರ ಜೊತೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು.
ರಾತ್ರಿ 9:00 ಸುಮಾರಿಗೆ ಅಗ್ನಿ ಹೋತ್ರ ಕಾರ್ಯಕ್ರಮದಲ್ಲಿ ಮಲಾಧಾರಿಗಳು ಉರಿಯುವ ಕೆಂಡದ ಮೇಲೆ ನಡೆದು ತಮ್ಮ ಇಷ್ಟಾರ್ಥ ಪೂರೈಸುವಂತೆ ಅಯ್ಯಪ್ಪನಿಗೆ ಪ್ರಾರ್ಥಿಸಿ ಅಯ್ಯಪನ್ನ ಭಕ್ತಿಗೆ ಪಾತ್ರರಾಗಿದ್ದಾರೆ.










